ಕೊರೋನಾ ಲಸಿಕೆ ಬರುವ ತನಕ ಎಚ್ಚರ ಅತ್ಯಗತ್ಯ: ಪ್ರಧಾನಿ ಮೋದಿ
ಹಬ್ಬಗಳ ಸಂದರ್ಭದಲ್ಲಿ ಲಾಕ್‌ಡೌನ್ ಮುಗಿದಿದ್ದರೂ ಕೊರೋನಾ ದೇಶದಿಂದ ಹೋಗಿಲ್ಲ ಎಂಬುದನ್ನು ಮರೆಯುವುದು ಬೇಡ.
ಅಗ್ನಿ, ಶತ್ರು ಮತ್ತು ರೋಗದ ವಿಷಯದಲ್ಲಿ ಎಂದೂ ಕಡಿಮೆ ಅಂದಾಜು ಮಾಡಬಾರದು. ಕೊರೋನಾ ಸೋಂಕಿನ ವಿಷಯದಲ್ಲೂ ಇದು ನಿಜ.
ಕರಾವಳಿ ಕರ್ನಾಟಕ ವರದಿ
ನವದೆಹಲಿ: ಹಬ್ಬಗಳ ಸಂದರ್ಭದಲ್ಲಿ ನಾವು ಲಾಕ್‌ಡೌನ್ ಮುಗಿದಿದ್ದರೂ ಕೊರೋನಾ ದೇಶದಿಂದ ಹೋಗಿಲ್ಲ ಎಂಬುದನ್ನು ಮರೆಯುವುದು ಬೇಡ. ಕೋವಿಡ್ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ದಯವಿಟ್ಟು ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಕೈಗಳನ್ನು ತೊಳೆದುಕೊಳ್ಳಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹಬ್ಬಗಳನ್ನು ಆಚರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ವಿನಂತಿಸಿದ್ದಾರೆ,
ರಾಮಚರಿತಮಾನಸದಲ್ಲಿ ಒಂದು ಒಳ್ಳೆಯ ಮಾತಿದೆ. ಅಗ್ನಿ, ಶತ್ರು ಮತ್ತು ರೋಗದ ವಿಷಯದಲ್ಲಿ ಎಂದೂ ಕಡಿಮೆ ಅಂದಾಜು ಮಾಡಬಾರದು. ಕೊರೋನಾ ಸೋಂಕಿನ ವಿಷಯದಲ್ಲೂ ಇದು ನಿಜ. ಲಸಿಕೆ ಬರುವ ತನಕ ನಮ್ಮ ಎಚ್ಚರ ಕಡಿಮೆಯಾಗಬಾರದು ಎಂದು ಪ್ರಧಾನಿ ಎಚ್ಚರಿಸಿದರು.
ಫಸಲು ನೋಡಿ ಕೆಲಸ ಮುಗಿಯಿತು ಎಂದು ಖುಶಿ ಪಡುತ್ತೇವೆ. ಆದರೆ ಫಸಲು ಮನೆ ತನಕ ಬರುವವರೆಗೆ ಕೆಲಸ ನಿಲ್ಲಿಸಕೂಡದು ಎಂದು ಕಬೀರ್ ವಚನ ಉದಾಹರಿಸಿದರು.
ಅಮೇರಿಕ, ಬ್ರೆಝಿಲ್‌ಗಳಿಗೆ, ಬ್ರಿಟನ್ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮವಾಗಿದೆ. ವಿಶ್ವದ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಜೀವ ಕಾಪಾಡಲು ಯಶಸ್ವಿಯಾಗಿದೆ ಎಂದು ಪ್ರಧಾನಿ ನುಡಿದರು. ಲಸಿಕೆ ಬಂದೊಡನೆ ಜನರಿಗೆ ತಲುಪಿಸಲು ಭಾರತ ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು.
ಜನತಾ ಕರ್ಪ್ಯೂನಿಂದ ಜನರು ಕಷ್ಟಪಟ್ಟಿದ್ದಾರೆ. ಈಗ ತಮ್ಮ ಜವಾಬ್ದಾರಿ ನಿರ್ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಮನೆಯಿಂದ ಹೊರಬರುವ ಸಂದರ್ಭ ಎಚ್ಚರಿಕೆ ಅತ್ಯಗತ್ಯ ಎಂದು ಪ್ರಧಾನಿ ದೇಶವನ್ನು ಉದ್ದೇಶಿಸಿ ಮಂಗಳವಾರ ಸಂಜೆ ಮಾಡಿದ ಭಾಷಣದಲ್ಲಿ ಕೊರೋನಾ ಬಗ್ಗೆ ನಿರ್ಲಕ್ಷ ಬೇಡ ಎಂದು ಎಚ್ಚರಿಸಿದ್ದಾರೆ.