ಉಡುಪಿ: ಕಾರಿಗೆ ರಿಕ್ಷಾ ಡಿಕ್ಕಿ; ಚಾಲಕ ಮೃತ್ಯು

ರಸ್ತೆ ಬದಿ ನಿಂತಿದ್ದ ಕಾರಿಗೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿ.

ಕರಾವಳಿ ಕರ್ನಾಟಕ ವರದಿ
ಉಡುಪಿ: ರಸ್ತೆ ಬದಿ ನಿಂತಿದ್ದ ಕಾರಿಗೆ ರಿಕ್ಷಾ ಡಿಕ್ಕಿ ಹೊಡೆದಾಗ ಚಾಲಕ ಸಾವಪ್ಪಿದ ಘಟನೆ ಗುಂಡಿಬೈಲು ನಾಗನಕಟ್ಟೆ ಸಮೀಪ ನಡೆದಿದೆ.

ಮೃತರನ್ನು ಮೂಡಬೆಟ್ಟುವಿನ ಸುನಿಲ್(44) ಎಂದು ಗುರುತಿಸಲಾಗಿದೆ.

ರಸ್ತೆ ಬದಿ ನಿಂತಿದ್ದ ಕಾರಿಗೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿದ್ದು, ಸುನಿಲ್ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.

Get real time updates directly on you device, subscribe now.