‘ಪ್ಲಾಸ್ಮಾ ಥೆರಪಿ’ ಪ್ರಯೋಜನವಿಲ್ಲ: ಕೋವಿಡ್ ಮಾರ್ಗಸೂಚಿಯಿಂದ ಕೈಬಿಡಲು ನಿರ್ಧಾರ

ರೋಗ ಉಲ್ಬಣವಾಗುವುದನ್ನು ಈ ಚಿಕಿತ್ಸೆ ತಡೆಯಲಿಲ್ಲ. ಕೋವಿಡ್ ರೋಗಿಗಳಲ್ಲಿ ಮರಣ ಪ್ರಮಾಣವೂ ಕಡಿಮೆಯಾಗಿಲ್ಲ.

ರಾಷ್ಟ್ರೀಯ ಕೋವಿಡ್19 ಮಾನದಂಡದಿಂದ ಪ್ಲಾಸ್ಮಾ ಚಿಕಿತ್ಸೆ ಕೈಬಿಡಲು ಐಸಿಎಂ‌ಆರ್ ನಿರ್ಧರಿಸಿದೆ.

ಕರಾವಳಿ ಕರ್ನಾಟಕ ವರದಿ
ನವದೆಹಲಿ: ರಾಷ್ಟ್ರೀಯ ಕೋವಿಡ್19 ಮಾನದಂಡದಿಂದ ಪ್ಲಾಸ್ಮಾ ಚಿಕಿತ್ಸೆ ಕೈಬಿಡಲು ಐಸಿಎಂ‌ಆರ್ ನಿರ್ಧರಿಸಿದೆ. ಪ್ಲಾಸ್ಮಾ ಥೆರಪಿಯಿಂದ ಕೋವಿಡ್ ರೋಗಿಗಳು ಗುಣಮುಖರಾಗುತ್ತಿಲ್ಲ ಎಂಬುದು ಅಧ್ಯಯನದಿಂದ ಸಾಬೀತಾಗಿರುವುದರಿಂದ ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡದಿರಲು ಐಸಿಎಂ‌ಆರ್ ನಿರ್ಧರಿಸಿದೆ.

ಕೋವಿಡ್‌ನಿಂದ ಗುಣಮುಖರಾದವರಿಂದ ಸಂಗ್ರಹಿಸಿದ ಪ್ಲಾಸ್ಮಾ ಕೋವಿಡ್ ರೋಗಿಗಳಿಗೆ ನೀಡಿ ಪರೀಕ್ಷೆ ನಡೆಸಲಾಗಿತ್ತು. ರೋಗ ಉಲ್ಬಣವಾಗುವುದನ್ನು ಈ ಚಿಕಿತ್ಸೆ ತಡೆಯಲಿಲ್ಲ. ಕೋವಿಡ್ ರೋಗಿಗಳಲ್ಲಿ ಮರಣ ಪ್ರಮಾಣವೂ ಕಡಿಮೆಯಾಗಿಲ್ಲ. ಆದ್ದರಿಂದ ಪ್ಲಾಸ್ಮಾ ಥೆರಪಿ ಕೈಬಿಡುವ ಬಗ್ಗೆ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ.

ದೇಶದ 29 ಆಸ್ಪತ್ರೆಗಳಲ್ಲಿ ಐಸಿಎಂ‌ಆರ್ ಉಸ್ತುವಾರಿಯಲ್ಲಿ ಪ್ಲಾಸ್ಮಾ ಥೆರಪಿ ಮೇಲೆ ಅಧ್ಯಯನ ನಡೆಸಲಾಗಿದ್ದು, 464ರೋಗಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. 350 ಸಂಶೋಧಕರು ಇದರಲ್ಲಿ ಭಾಗಿಯಾಗಿದ್ದರು. ಅಧ್ಯಯನ ವರದಿ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಲಿದೆ.

Get real time updates directly on you device, subscribe now.