‘ಸುಕುಮಾರ ಶೆಟ್ರು ಒಬ್ಬ ಸನ್ಯಾಸಿ. ನನ್ನ ಹತ್ರ ಕೋಟಿಗಟ್ಲೆ ಹಣ ಇದೆ’: ‘ಕೊರೋನಾ ಬಿಲ್’ ಆರೋಪಕ್ಕೆ ಶಾಸಕರ ಆಕ್ರೋಶ

ಪ್ರತೀ ಕಾಮಗಾರಿಗೂ ಅವಶ್ಯವಾದ ಹಣದ ವ್ಯವಸ್ಥೆ ಕ್ಷೇತ್ರದಲ್ಲಿ ಆಗುತ್ತಿರುವುದನ್ನು ನೋಡಿ ಕಾಂಗ್ರೆಸ್ಸಿಗರು ಹತಾಶರಾಗುತ್ತಿದ್ದಾರೆ. ಏನ್ ಮಾಡ್ತಾ ಇದ್ದಾರಪ್ಪ ಇವರು? ಎಂದು ಕಾಂಗ್ರೆಸ್‌ನವರು ಈಗ ಎಚ್ಚತ್ತುಕೊಂಡಿದ್ದಾರೆ.

ಕಾಂಗ್ರೆಸ್ ಕಟ್ಟಾಳುವಾದ ಮಂಜಯ್ಯ ಶೆಟ್ರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದಾಗ ಅವರಿಗೆ(ಗೋಪಾಲ್ ಪೂಜಾರಿಗೆ) ಆಘಾತವಾಯಿತು.

ಕರಾವಳಿ ಕರ್ನಾಟಕ ವರದಿ
ಬೈಂದೂರು: “ಸುಕುಮಾರ ಶೆಟ್ರು ಒಬ್ಬ ಸನ್ಯಾಸಿ. ನಾನು ಒಪನ್ ಹೇಳ್ತೇನೆ. ಎಲ್ಲಿಯೂ ರೆಸ್ಟ್ ಹೌಸ್ ಇಲ್ಲ ನನಗೆ. ಒನ್ಲಿ ಮನೆಯಲ್ಲಿ ಮಾತ್ರ ರೆಸ್ಟ್ ಹೌಸ್. ರೆಸ್ಟ್ ಹೌಸ್ ಇಲ್ಲ. ಎಲ್ಲ್ ಹೋದ್ರೂ ಮನೆಯಲ್ಲೇ ಕುಳಿತುಕೊಳ್ಳುವುದು. ಮತ್ತೆಲ್ಲಿಲ್ಲ. ಸನ್ಯಾಸಿಗೆ ರೆಸ್ಟ್ ಹೌಸ್ ಯಾಕ್ರಿ? ಯಾಕ್ರೀ ಸನ್ಯಾಸಿಗೆ ರೆಸ್ಟ್ ಹೌಸ್? ರೆಸ್ಟ್ ಹೌಸ್ ಇಲ್ಲ ನನಗೆ. ಮನೆಯಲ್ಲೇ ಇರ್ಬೇಕಾತ್ತೆ. ಬೇರೆ ಏನಿಲ್ಲ. ಐ ಆಮ್ ಎ ವೆಜಿಟೇರಿಯನ್. ನಾನು ತಪ್ಪ್ ಕೆಲ್ಸ ಮಾಡುವುದಿಲ್ಲ. ನನಗೆ ಯಾವುದರ ಮೇಲೂ ವ್ಯಾಮೋಹ ಇಲ್ಲ. ನನಗೆ ಬೇಕಾದಷ್ಟು ದೇವರು ಕೊಟ್ಟಿದ್ದಾನೆ. ನನ್ ಹತ್ರ ಬೇಕಾದಷ್ಟು ಕೋಟಿಗಟ್ಲೆ ವ್ಯವಸ್ಥೆ ಕೊಟ್ಟಿದ್ದಾನೆ. ನಾನು ಅದನ್ನ ಏನ್ ಮಾಡಬೇಕು ಎಂದು ಥಿಂಕ್ ಮಾಡ್ತಾ ಇದ್ದೇನೆ ಮುಂದೆ. ಬದುಕುವಲ್ಲಿಯರಿಗಾದರೂ ಬೇಕಲ್ಲ. ಇಲ್ಲ್‌ದಿದ್ರೆ ಕಡಿಕೆ ನಾಯ್ ಸಯ್ತ ಮೂಸುದಿಲ್ಲ. ಆದ್ದರಿಂದ ಈ ವ್ಯವಸ್ಥೆಯಲ್ಲಿದ್ದೇನೆ. ಇಲ್ಲದಿದ್ದರೆ ನನ್ನಲ್ಲಿ ಯಾವ ಹತಾಶ ಭಾವನೆಯೂ ಇಲ್ಲ” ಎಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ತನ್ನ ಬಗ್ಗೆ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್‌ನವರು ಈಗ ಎಚ್ಚತ್ತುಕೊಂಡಿದ್ದಾರೆ

ಪ್ರತೀ ಕಾಮಗಾರಿಗೂ ಅವಶ್ಯವಾದ ಹಣದ ವ್ಯವಸ್ಥೆ ಕ್ಷೇತ್ರದಲ್ಲಿ ಆಗುತ್ತಿರುವುದನ್ನು ನೋಡಿ ಕಾಂಗ್ರೆಸ್ಸಿಗರು ಹತಾಶರಾಗುತ್ತಿದ್ದಾರೆ. ಏನ್ ಮಾಡ್ತಾ ಇದ್ದಾರಪ್ಪ ಇವರು? ಏನ್ ಮಾಡೋದು ಏನ್ ಮಾಡೋದು ಎಂದು ಕಾಂಗ್ರೆಸ್‌ನವರು ಈಗ ಎಚ್ಚತ್ತುಕೊಂಡಿದ್ದಾರೆ. ಯಾವ ರೀತಿಯಲ್ಲಾದರೂ ಚುನಾವಣೆ ಎದುರಿಸುವ ಪ್ರಯತ್ನ ಮಾಡ್ತಾ ಇದ್ದಾರೆ ಎಂದು ತನ್ನ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಭ್ರಷ್ಟಾಚಾರ ಆರೋಪಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲಿ ನೋಡಿದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ಕಟ್ಟಾಳುವಾದ ಮಂಜಯ್ಯ ಶೆಟ್ರು ಅವರಂಥ ಒಬ್ಬ ಸಮರ್ಥ ಸಜ್ಜನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದಾಗ ಅವರಿಗೆ ಆಘಾತವಾಯಿತು. ಇಡೀ ಕಾಂಗ್ರೆಸ್ ಪಕ್ಷದ ಪಟ್ಲಾಂ ಬಿಜೆಪಿಗೆ ಮುಂದಿನ ದಿನ ಸೇರುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಬಿಜೆಪಿ ಸ್ಟ್ರಾಂಗ್ ಆಗ್ತಾ ಇದೆ ದಿನ ಹೋದ ಹಾಗೆ. ಏನಾದರೂ ಮಾಡಿ ಶಾಸಕರ ಮೇಲೆ ಒಂದು ಅಪವಾದ ಮಾಡಬೇಕು ಎಂದು ಸುಕುಮಾರ ಶೆಟ್ಟಿ ತೀವೃ ಅಸಮಾಧಾನ ಹೊರಗೆಡಹಿದ್ದಾರೆ.

ಕುಂದಾಪುರ ಕ್ಷೇತ್ರದವರು ಇಲ್ಲಿ ಬಂದು ಮಾತಾಡಬೇಕಾ?

ಕಾಂಗ್ರೆಸ್‌ನವರು ಶಾಸಕರಾಗಿದ್ದಾಗ ಏನ್ ಮಾಡಿದ್ದಾರಪ್ಪ? ಲಿಸ್ಟ್ ಹೇಳಿ ನನಗೆ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿಯವರ ವಿರುದ್ಧ ಶೆಟ್ಟಿ ಹರಿಹಾಯ್ದಿದ್ದಾರೆ. ಮಾಡಿದ್ದೇನು? ಕತೆ ಹೇಳುವುದು? ಓ ಅವರು ಹಾಗೆ, ಹೀಗೆ…ಮತ್ತೆ ನಮ್ಮ ಕ್ಷೇತ್ರಕ್ಕೆ ಸಂಬಂಧವಿಲ್ಲದ ಕುಂದಾಪುರ ಕ್ಷೇತ್ರದವರ ತಿರುಗಾಟ ಇಲ್ಲಿ. ಇಲ್ಲಿ ಜನ ಇಲ್ಲವಾ ಹಾಗಾದರೆ? ಕುಂದಾಪುರ ಕ್ಷೇತ್ರದವರು ಇಲ್ಲಿ ಬಂದು ಮಾತಾಡಬೇಕಾ ಎಂದು ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ವಿರುದ್ಧ ಕೋಪ ವ್ಯಕ್ತಪಡಿಸಿದರು.

ವಿಕಾಸ ಹೆಗ್ಡೆ ವಿಧಾನ ಸೌಧ ಮತ್ತು ವಿಕಾಸ ಸೌಧದ ಏಜೆಂಟ್

ವಿಕಾಸ್ ಹೆಗ್ಡೆ ಶಾಸಕರ ಬಗ್ಗೆ ಮಾತಾಡುವಾಗ ಮುಂದಿನ ದಿನಗಳಲ್ಲಿ ಯೋಚನೆ ಮಾಡಬೇಕು. ವಿಕಾಸ ಹೆಗ್ಡೆ ವಿಧಾನ ಸೌಧ ಮತ್ತು ವಿಕಾಸ ಸೌಧದ ಏಜೆಂಟ್ ಎಂದು ಮೊನ್ನೆ ನಮಗೆ ಗೊತ್ತಾಯಿತು. ಅವರಿಗೆ ಬುದ್ಧಿಯೇ ಬೆಳೆದಿಲ್ಲ. ಅವರು ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತಾಡಬೇಕು ಎಂದು ತಾ.ಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಶಾಸಕರ ವಿರುದ್ಧ ಆರೋಪ ಮಾಡಿರುವ ವಿಕಾಸ್ ಹೆಗ್ಡೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಬಿಲ್ ಸರಕಾರದಿಂದ ಪಡೆದಿಲ್ಲ

ಮಾಜಿ ಶಾಸಕ ಗೋಪಾಲ ಪುಜಾರಿಯವರು ಸುಕುಮಾರ ಶೆಟ್ಟಿಯವರು ಕೊಲ್ಲೂರು ದೇವಸ್ಥಾನಕ್ಕೆ ಬರಲಿ ಎಂದು ಸವಾಲು ಹಾಕಿದ್ದನ್ನು ಫೇಸ್‌ಬುಕ್ ‌ನಲ್ಲಿ ನೋಡಿದ್ದೇನೆ. ಸುಕುಮಾರ ಶೆಟ್ಟರು ಕೊರೋನಾ ಹೆಸರಲ್ಲಿ ಸರಕಾರಕ್ಕೆ ಬಿಲ್ ನೀಡಿದ್ದೇ ಹೌದಾದರೆ ಅದರ ಬಗ್ಗೆ ನಮ್ಮ ಶಾಸಕರು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂಬ ಸವಾಲನ್ನು ಮಾಜಿ ಶಾಸಕರಿಗೆ ನಾನು ಕೊಡುತ್ತಿದ್ದೇನೆ ಎಂದು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶಾಸಕರು ಕಣ್ಣಿನ ಚಿಕಿತ್ಸೆಗೆ ಒಳಗಾಗಿದ್ದರು. ಕೊರೋನಾ ಬಿಲ್ ಸರಕಾರದಿಂದ ಪಡೆದಿಲ್ಲ ಎಂದು ಶಾಸಕರ ನಡೆಯನ್ನು ಸಮರ್ಥಿಸಿದ್ದಾರೆ.

 

 

Get real time updates directly on you device, subscribe now.