ಯಾರನ್ನು ಬಂಧಿಸಬೇಕು ಎಂದು ಸಾರ್ವಜನಿಕರನ್ನು ಕೇಳುವುದು ತನಿಖಾ ಪತ್ರಿಕೋದ್ಯಮವೆ? ರಿಪಬ್ಲಿಕ್ ಟಿವಿಗೆ ಕೋರ್ಟ್ ಪ್ರಶ್ನೆ
ರಿಪಬ್ಲಿಕ್ ಟಿವಿ ‘ರಿಯಾರನ್ನು ಬಂಧಿಸಿ’ ಎಂದು ಟ್ವಿಟರ್‌ನಲ್ಲಿ ಹ್ಯಾಷ್‌ಟ್ಯಾಗ್ ಅಭಿಯಾನ ನಡೆಸಿರುವುದನ್ನು ಮುಂಬೈ ಹೈಕೋರ್ಟ್ ಕಟುವಾಗಿ ಪ್ರಶ್ನಿಸಿದೆ.
ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಚಾನೆಲ್ ಕೊಲೆ ಎಂದು ಹೇಳುತ್ತಿದೆ. ‘ಇದು ಪತ್ರಿಕೋದ್ಯಮದ ಭಾಗವೆ?’
ಕರಾವಳಿ ಕರ್ನಾಟಕ ವರದಿ
ಮುಂಬೈ: ನಟ ಸುಶಾಂತ್‌ಸಿಂಗ್ ರಜಪೂತ್ ಅವರ ಸಾವಿನ ಹಿನ್ನೆಲೆಯಲ್ಲಿ ರಿಪಬ್ಲಿಕ್ ಟಿವಿ ‘ರಿಯಾರನ್ನು ಬಂಧಿಸಿ’ ಎಂದು ಟ್ವಿಟರ್‌ನಲ್ಲಿ ಹ್ಯಾಷ್‌ಟ್ಯಾಗ್ ಅಭಿಯಾನ ನಡೆಸಿರುವುದನ್ನು ಮುಂಬೈ ಹೈಕೋರ್ಟ್ ‘ಇದು ಪತ್ರಿಕೋದ್ಯಮದ ಭಾಗವೆ?’ ಎಂದು ಕಟುವಾಗಿ ಪ್ರಶ್ನಿಸಿದೆ.
ಪ್ರಕರಣವೊಂದರಲ್ಲಿ ಯಾರನ್ನು ಬಂಧಿಸಬೇಕೆಂದು ಜನರನ್ನು ಕೇಳುವುದು ತನಿಖಾ ಪತ್ರಿಕೋದ್ಯಮದ ಭಾಗವೆ? ಎಂದು ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರ ನ್ಯಾಯಪೀಠ ರಿಪಬ್ಲಿಕ್ ಟಿವಿ ಪರ ವಕೀಲರನ್ನು ಪ್ರಶ್ನಿಸಿತು.
ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಚಾನೆಲ್ ಕೊಲೆ ಎಂದು ಹೇಳುತ್ತಿದೆ. ಪ್ರಕರಣ ಕೊಲೆಯೋ, ಆತ್ಮಹತ್ಯೆಯೋ ಎಂಬ ಸ್ಪಷ್ಟತೆ ಇಲ್ಲದಿರುವಾಗ ಹ್ಯಾಷ್‌ಟ್ಯಾಗ್ ಅಭಿಯಾನ ನಡೆಸಿ ‘ರಿಯಾರನ್ನು ಬಂಧಿಸಿ’ ಎನ್ನುವುದು ತನಿಖಾ ಪತ್ರಿಕೋದ್ಯಮವೇ ಎಂದು ನ್ಯಾಯಮೂರ್ತಿಗಳು ರಿಪಬ್ಲಿಕ್ ಟಿವಿ ಪರ ವಕೀಲ ತ್ರೀವೇದಿಯವರನ್ನು ಪ್ರಶ್ನಿಸಿದರು.