ಕೊಪ್ಪರಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಮೊಯ್ದಿನ್ ಬಾವಗೆ ಕೊಲೆ ಬೆದರಿಕೆ

ಕೊಪ್ಪರಿಗೆ ಪೂಜೆಯಲ್ಲಿ ಭಾವೈಕ್ಯ ಸಾರುವ ನೆಲೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದಿದ್ದ ಮಾಜಿ ಶಾಸಕ

‘ಸೌಹಾರ್ದದ ನೆಲೆಯಲ್ಲಿ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಬೆದರಿಕೆ ಒಡ್ಡುವುದು ಸರಿಯಲ್ಲ’

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಸುಂಕದಕಟ್ಟೆ ದೇವಸ್ಥಾನವೊಂದರ ಕೊಪ್ಪರಿಗೆ ಪೂಜೆಯಲ್ಲಿ ಭಾವೈಕ್ಯ ಸಾರುವ ನೆಲೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದಿದ್ದ ಮಾಜಿ ಶಾಸಕ ಮೊಯ್ದಿನ್ ಬಾವ ಅವರಿಗೆ ಮುಂಬೈಯಿಂದ ಪೋನ್ ಕರೆ ಮಾಡಿ ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸರಿಗೆ ದೂರಲಾಗಿದೆ.

ಪ್ರತೀ ನವರಾತ್ರಿ ಹಬ್ಬದ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು ಬಾವಾ ಅವರಿಗೆ ಆಮಂತ್ರಿಸುತ್ತಿದ್ದು, ಈ ವರ್ಷವೂ ಬಾವ ಅವರು ಪ್ರತೀವರ್ಷದಂತೆ ದೇವಸ್ಥಾನಕ್ಕೆ ತೆರಳಿ ಕೊಪ್ಪರಿಗೆಗೆ ಅಕ್ಕಿ ಹಾಕಿದ್ದರು. ದೇವಸ್ಥಾನದವರು ಕೊಪ್ಪರಿಗೆಗೆ ಅಕ್ಕಿ ಹಾಕುವಂತೆ ಕೋರಿದ ಹಿನ್ನೆಲೆಯಲ್ಲಿ ಮೊಯ್ದಿನ್ ಬಾವ ಅವರು ಅಕ್ಕಿ ಹಾಕಿದ್ದರು.

ಮುಂಬೈಯಿಂದ ಕರೆ ಮಾಡಿದ ಅಪರಿಚಿತನೊಬ್ಬ ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಒಡ್ಡಿರುವುದರ ಬಗ್ಗೆ ಸುರತ್ಕಲ್ ಪೊಲೀಸರಿಗೆ ಬಾವ ದೂರು ನೀಡಿದ್ದಾರೆ.

ಸೌಹಾರ್ದದ ನೆಲೆಯಲ್ಲಿ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಬೆದರಿಕೆ ಒಡ್ಡುವುದು ಸರಿಯಲ್ಲ ಎಂಬುದು ಬಾವ ಅವರ ಅನಿಸಿಕೆಯಾಗಿದೆ.

 

Get real time updates directly on you device, subscribe now.