ಭಟ್ಕಳ: ದೇವಸ್ಥಾನದಲ್ಲಿ ಕಳವು, ಆರೋಪಿ ಅರ್ಚಕ ಸೆರೆ

ಸಾಗರದಿಂದ ಪರಾರಿಯಾಗುವ ಯತ್ನದಲ್ಲಿದ್ದಾಗ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಅರ್ಚಕ ಐಪಿಎಲ್ ಬೆಟಿಂಗ್ ವಿಷಯದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾಗುತ್ತಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.

ಕರಾವಳಿ ಕರ್ನಾಟಕ ವರದಿ
ಭಟ್ಕಳ: ಮುಂಡಳ್ಳಿ ಶ್ರೀದುರ್ಗಾಪ್ರಮೇಶ್ವರಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೇವಳದ ಗರ್ಭಗುಡಿಯಲ್ಲಿ ಕಳವು ಪ್ರಕರಣದಲ್ಲಿ ಯಲ್ಲಾಪುರದ ಇಡಗುಂದಿ ನಿವಾಸಿ ಸತೀಶ ರಾಮಚಂದ್ರ ಭಟ್ಟ ಎಂಬಾತನನ್ನು ಭಟ್ಕಳ ಗ್ರಾಮೀಣ ಪೊಲೀಸರು ಆತ ಸಾಗರದಿಂದ ಪರಾರಿಯಾಗುವ ಯತ್ನದಲ್ಲಿದ್ದಾಗ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಅರ್ಚಕ ಐಪಿಎಲ್ ಬೆಟಿಂಗ್ ವಿಷಯದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದ್ದು, ಇದೇ ಕಾರಣಕ್ಕೆ ದೇವಿಯ ಚಿನ್ನ ಕದ್ದು ಬ್ಯಾಂಕಿನಲ್ಲಿ ಅಡ ಇಟ್ಟಿದ್ದಾನೆ ಎನ್ನಲಾಗುತ್ತಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.

Get real time updates directly on you device, subscribe now.