‘ಉದ್ಯಾವರ ಫ್ರೆಂಡ್ಸ್ ಸರ್ಕಲ್’ ಆಶ್ರಯದಲ್ಲಿ ನೆಹರೂ ಬಗ್ಗೆ ವಿಡಿಯೋ ಭಾಷಣ ಸ್ಪರ್ಧೆ

ಪ್ರಾಥಮಿಕ ಶಾಲಾ ಮಕ್ಕಳಿಗೆ 'ಚಾಚಾ ನೆಹರೂ',ಪ್ರೌಢ ಶಾಲಾ ಮಕ್ಕಳಿಗೆ ಆಧುನಿಕ ಭಾರತದ ಶಿಲ್ಪಿ ಜವಾಹರ್ ಲಾಲ್ ನೆಹರೂ.

ಗರಿಷ್ಠ 5 ನಿಮಿಷದ ವಿಡಿಯೋವನ್ನು 9845559186 ಸಂಖ್ಯೆಗೆ ಕಳುಹಿಸಿ.

ಕರಾವಳಿ ಕರ್ನಾಟಕ ವರದಿ
ಉದ್ಯಾವರ: 2017ರ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ‘ಉದ್ಯಾವರ ಫ್ರೆಂಡ್ಸ್ ಸರ್ಕಲ್’ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರೂ ಬಗ್ಗೆ ಕನ್ನಡದಲ್ಲಿ ವಿಡಿಯೋ ಭಾಷಣ ಸ್ಪರ್ಧೆ ಜರಗಲಿದೆ.

ವಿಷಯ: ಪ್ರಾಥಮಿಕ ಶಾಲಾ ಮಕ್ಕಳಿಗೆ ‘ಚಾಚಾ ನೆಹರೂ’ .ಪ್ರೌಢ ಶಾಲಾ ಮಕ್ಕಳಿಗೆ ಆಧುನಿಕ ಭಾರತದ ಶಿಲ್ಪಿ ಜವಾಹರ್ ಲಾಲ್ ನೆಹರೂ.

ಸ್ಪರ್ಧೆಯ ವಿಜೇತರಿಗೆ ಎರಡೂ ವಿಭಾಗಗಳಲ್ಲಿ ರೂ.3,000.00, ರೂ. 2,000.00, ರೂ. 1,000.00 ಮತ್ತು ರೂ. 500.00ರಂತೆ 5 ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ಗರಿಷ್ಠ 5 ನಿಮಿಷದ ವಿಡಿಯೋವನ್ನು ತಮ್ಮ ಹೆಸರು, ತರಗತಿ, ಶಾಲೆ ಮುಂತಾದ ವಿವರಗಳೋಂದಿಗೆ ತಾ. 14.11.2020 ಶನಿವಾರದ ಒಳಗಾಗಿ 9845559186 ಸಂಖ್ಯೆಗೆ ಕಳುಹಿಸಿ ಕೊಡಬೇಕೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ ಪ್ರಕಟಣೆಯಲ್ಲಿ ತಿಳಿಸಿರುವರು.

Get real time updates directly on you device, subscribe now.