ಲಾರಿ ಡಿಕ್ಕಿ; ಬೈಕ್ ಸವಾರ ನವದಂಪತಿ ಮೃತ್ಯು

ತೊಕ್ಕೊಟ್ಟು ಓವರ್‌ಬ್ರಿಡ್ಜ್‌ ಸಮೀಪ ಮಂಗಳವಾರ ಸಂಜೆ ನಡೆದ ಘಟನೆ.

ದಂಪತಿಗಳು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಿಬಂದಿಯಾಗಿದ್ದರು.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನವದಂಪತಿಗಳು ಸಾವನ್ನಪ್ಪಿದ ಘಟನೆ ತೊಕ್ಕೊಟ್ಟು ಓವರ್‌ಬ್ರಿಡ್ಜ್‌ ಸಮೀಪ ಮಂಗಳವಾರ ಸಂಜೆ ನಡೆದಿದೆ.

ಮೃತರನ್ನು ಬಜಾಲ್ ನಿವಾಸಿ ರಾಯನ್ ಫೆರ್ನಾಂಡಿಸ್(34) ಮತ್ತು ಪತ್ನಿ ಪ್ರಿಯಾ ಫೆರ್ನಾಂಡಿಸ್(25) ಎಂದು ಗುರುತಿಸಲಾಗಿದೆ.  ಬೈಕ್ ಚಲಾಯಿಸುತ್ತಿದ್ದ ರಾಯನ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಪತ್ನಿ ಪ್ರಿಯಾ ಅವರು ಸ್ಥಳದಲ್ಲೇ ಸಾವಪ್ಪಿದ್ದಾರೆ.

ಮಂಗಳೂರಿನ ಬಜಾಲ್ ನಿವಾಸಿ ರಾಯನ್ ಅವರು ಹತ್ತು ದಿನಗಳಿಂದ ಉಳ್ಳಾಲ  ಮಾಸ್ತಿಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ದಂಪತಿಗಳು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಸಿಬಂದಿಯಾಗಿದ್ದರು.

ಬೈಕ್ ಉಳ್ಳಾಲ ಕಡೆಗೆ ತಿರುಗುವ ಸಂದರ್ಭ ಲಾರಿ ಡಿಕ್ಕಿಯಾಗಿದ್ದ ಪರಿಣಾಮ ಪ್ರಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ರಾಯನ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮರಣ ಹೊಂದಿದ್ದಾರೆ.

 

 

Get real time updates directly on you device, subscribe now.