ಅರ್ನಾಬ್ ಗೋಸ್ವಾಮಿಗೆ 14ದಿನ ನ್ಯಾಯಾಂಗ ಬಂಧನ: ಮುಂಬೈ ಹೈಕೋರ್ಟ್‌ಗೆ ಮೊರೆ

ಅರ್ನಬ್ ಗೋಸ್ವಾಮಿ ಪ್ರಭಾವಿಯಾಗಿರುವುದರಿಂದ ಪ್ರಕರಣದ ಪುರಾವೆಗಳನ್ನು ತಿರುಚಬಲ್ಲರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

ತಾಯಿ-ಮಗನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ.

ಕರಾವಳಿ ಕರ್ನಾಟಕ ವರದಿ
ಮುಂಬೈ: ತಾಯಿ-ಮಗನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ(47) ವಕೀಲರ ಅರ್ಜಿಯನ್ನು ಮುಂಬೈ ಹೈಕೋರ್ಟ್ ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅರ್ನಬ್ ಗೋಸ್ವಾಮಿಯ ವಕೀಲರಾದ ಆಬಾದ್ ಪೊಂಡಾ ಮತ್ತು ಗೌರವ್ ಪರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಅರ್ನಾಬ್ ಗೋಸ್ವಾಮಿಗೆ 14ದಿನ ನ್ಯಾಯಾಂಗ ಬಂಧನ

ತಾಯಿ-ಮಗನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಅಲಿಗಢ್ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಹದಿನಾಲ್ಕು ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿದೆ.

ಅರ್ನಬ್ ಗೋಸ್ವಾಮಿ ಪ್ರಭಾವಿಯಾಗಿರುವುದರಿಂದ ಪ್ರಕರಣದ ಪುರಾವೆಗಳನ್ನು ತಿರುಚಬಲ್ಲರು. ಅವರನ್ನು ಹದಿನಾಲ್ಕು ದಿನ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯವನ್ನು ಕೋರಿದ್ದರು.

ಬಾಕಿ ಹಣ ನೀಡದೇ ಆತ್ಮಹತ್ಯೆಗೆ ಪ್ರಚೋದನೆ

ಇಂಟಿರೀಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದಾ ನಾಯಕ್ ಅವರಿಗೆ ನೀಡಬೇಕಿದ್ದ ಹಣ ನೀಡದೇ ಅವರ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಇನ್ನಿಬ್ಬರನ್ನು ಬಂಧಿಸಲಾಗಿದೆ.

ಅರ್ನಬ್ ವಶಕ್ಕೆ ಪಡೆಯುವ ಸಂದರ್ಭ ಪೊಲೀಸ್ ಅಧಿಕಾರಿಯೋರ್ವರಿಗೆ ನಿಂದಿಸಿ, ಹಲ್ಲೆಗೈದು, ಸರಕಾರಿ ದಾಖಲೆಪತ್ರಗಳನ್ನು ಹರಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅರ್ನಬ್ ಪತ್ನಿ, ಪುತ್ರ ಮತ್ತು ಇನ್ನಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅರ್ನಾಬ್ ಬಂಧನಕ್ಕೆ ಅಮಿತ್ ಷಾ, ಬಿಜೆಪಿ ಮುಖಂಡರ ಆಕ್ರೋಶ

ಅರ್ನಾಬ್ ಬಂಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹಲ್ಲೆ, ತುರ್ತು ಪರಿಸ್ಥಿಯನ್ನು ನೆನಪಿಸುವಂಥ ಘಟನೆ ಎಂದು ಅರ್ನಾಬ್ ಬೆಂಬಲಕ್ಕೆ ನಿಂತಿದ್ದಾರೆ.

ಮಾನವಹಕ್ಕು ಆಯೋಗಕ್ಕೆ ದೂರು

ಮುಂಬೈ ಪೊಲೀಸರು ಮತ್ತು ರಾಯ್ಗಢ ಪೊಲೀಸರು ಅರ್ನಾಬ್ ವಶಕ್ಕೆ ಪಡೆಯುವ ಸಂದರ್ಭ ಅವರನ್ನು ಎಳೆದಾಡಿದ್ದಾರೆ, ಹಲ್ಲೆಗೈದಿದ್ದಾರೆ, ಇದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ವಕೀಲ ಸಿದ್ದಾರ್ಥ ಆಚಾರ್ಯ ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಅರ್ನಾಬ್ ಗೋಸ್ವಾಮಿ ತನ್ನ ಮೇಲೆ ಪೊಲೀಸರು ಹಲ್ಲೆಗೈದಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಅದನ್ನು ಪುಷ್ಠೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಅರ್ನಾಬ್ ಮೇಲೆ ಪೊಲೀಸರು ಹಲ್ಲೆಗೈದಂತೆ ಕಂಡುಬರುವುದಿಲ್ಲ ಎಂದು ಅಲೀಘಡ್ ನ್ಯಾಯಾಧೀಶರು ಹೇಳಿದ್ದಾರೆ.

 

Get real time updates directly on you device, subscribe now.