ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಹೃದಯಾಘಾತದಿಂದ ನಿಧನ

ಬೆಳಗೆರೆಯವರ ಕನಸಿನ ಕೂಸಾದ ಪ್ರಾರ್ಥನಾ ಶಾಲೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ತಿಳಿದುಬಂದಿದೆ.

‘ಹಾಯ್ ಬೆಂಗಳೂರ್’ ಸಂಪಾದಕರಾಗಿ ನಾಡಿನ ಜನಮನ ತಲುಪಿದ ಪತ್ರಕರ್ತ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ನಾಡಿನ ಖ್ಯಾತ ಪತ್ರಕರ್ತ, ಸಾಹಿತಿ, ‘ಹಾಯ್ ಬೆಂಗಳೂರ್’ ಸಂಪಾದಕ ರವಿ ಬೆಳಗೆರೆ(62) ತಡರಾತ್ರಿ ಒಂದು ಗಂಟೆಗೆ ಮೃತಪಟ್ಟಿದ್ದಾರೆ.

ರಾತ್ರಿ ಊಟ ಮುಗಿಸಿ ನಿದ್ರೆ ಮಾಡುತ್ತಿದ್ದ ರವಿ ಬೆಳಗೆರೆಯವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಬೆಳಗೆರೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು.

ಮೃತದೇಹವನ್ನು ಅವರ ನಿವಾಸದಲ್ಲಿ ಇರಿಸಲಾಗಿದ್ದು, ಬೆಳಿಗ್ಗೆ ಬೆಳಗೆರೆಯವರ ಕನಸಿನ ಕೂಸಾದ ಪ್ರಾರ್ಥನಾ ಶಾಲೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ತಿಳಿದುಬಂದಿದೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ರವಿ ಬೆಳಗೆರೆಯವರು ಪತ್ರಕರ್ತರಾಗಿ ನಾಡಿನ ಜನಮನ ಗೆದ್ದವರು.

Get real time updates directly on you device, subscribe now.