ನಿತೀಶ್ ಕುಮಾರ್ ರಾಜಕೀಯವಾಗಿ ತಿರಸ್ಕೃತ, ಬಳಲಿದ ನಾಯಕ
'ನಿತೀಶ್ ಕುಮಾರ್ ಬಿಜೆಪಿ ನಾಮನಿರ್ದೇಶಿತ ಮುಖ್ಯಮಂತ್ರಿ'
ತಿರಸ್ಕೃತ, ಬಳಲಿದ ನಾಯಕ ಮುಖ್ಯಮಂತ್ರಿಯಾಗಿರುವುದರಿಂದ ಬಿಹಾರ ಇನ್ನಷ್ಟು ವರ್ಷ ನೀರಸ ಆಡಳಿತ ಅನುಭವಿಸಬೇಕಾಗಿದೆ
ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಬಿಜೆಪಿ ನಾಮನಿರ್ದೇಶಿತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಿತೀಶ್ ಕುಮಾರ್ ರಾಜಕೀಯವಾಗಿ ತಿರಸ್ಕೃತ ಬಳಲಿದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಚುನಾವಣಾ ತಂತ್ರಜ್ನ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರಿಗೆ ಅಭಿನಂದನೆ. ಬಿಹಾರ ಇಂಥ ತಿರಸ್ಕೃತ, ಬಳಲಿದ ನಾಯಕ ಮುಖ್ಯಮಂತ್ರಿಯಾಗಿರುವುದರಿಂದ ಇನ್ನಷ್ಟು ವರ್ಷ ನೀರಸ ಆಡಳಿತ ಅನುಭವಿಸಬೇಕಾಗಿದೆ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.