ಕೋವಿಡ್-19: ಅಮೇರಿಕಾದ ಮಾಡರ್ನಾ ಕಂಪೆನಿಯಿಂದ 94.5ಶೇ. ಪರಿಣಾಮಕಾರಿ ಲಸಿಕೆ ಘೋಷಣೆ
ಮಾಡರ್ನಾ ಲಸಿಕೆಯನ್ನು ಒಂದು ತಿಂಗಳ ಕಾಲ ಸಾಮಾನ್ಯ ಫ್ರಿಜ್ನಲ್ಲಿ ಸಂಗ್ರಹಿಸಿ ಇಡಬಹುದಾಗಿದ್ದು, ಲಸಿಕೆ ವಿತರಣೆ ಪ್ರಕ್ರಿಯೆ ಸಂದರ್ಭ ಅನುಕೂಲಕರ.
ಮಾಡರ್ನಾ ಕಂಪೆನಿಯ ಕೋವಿಡ್-19 ಲಸಿಕೆಯು ಮೂರನೇ ಹಂತದ ಪ್ರಯೋಗಗಳಲ್ಲಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ.
ಕರಾವಳಿ ಕರ್ನಾಟಕ ವರದಿ
ನ್ಯೂಯಾರ್ಕ್: ಮಸಾಚುಸೆಟ್ಸ್ ಮೂಲದ ಮಾಡರ್ನಾ ಬಯೊಟೆಕ್ ಕಂಪೆನಿ ಅಭಿವೃದ್ಧಿ ಪಡಿಸಿದ ಕೋವಿಡ್-19 ಲಸಿಕೆ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎಂಬ ಮಹತ್ವದ ಮಾಹಿತಿಯನ್ನು ಪ್ರಕಟಿಸಿದೆ.
ಮಾಡರ್ನಾ ಕಂಪೆನಿಯ ಕೋವಿಡ್-19 ಲಸಿಕೆಯು ಮೂರನೇ ಹಂತದ ಪ್ರಯೋಗಗಳಲ್ಲಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
ಜನವರಿಯಿಂದಲೇ ಸಂಸ್ಥೆ ಕೋವಿಡ್-19 ಪರಿಣಾಮಕಾರಿ ಲಸಿಕೆ ತಯಾರಿ ಬಗ್ಗೆ ಪ್ರತೀ ದಿನವೂ ಅತೀ ಮುಖ್ಯ ಎಂಬ ಅರಿವಿನೊಂದಿಗೆ ತೊಡಗಿಸಿಕೊಂಡಿತ್ತು ಎಂದು ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ತಿಳಿಸಿದ್ದಾರೆ.
30,000ಕ್ಕೂ ಅಧಿಕ ಜನರ ಮೇಲೆ ನಡೆಸಿದ ಪ್ರಯೋಗಗಳಿಂದ ಕೋವಿಡ್ ಲಕ್ಷಣಗಳನ್ನು ತೋರಿಸುವ ಬಹುತೇಕ ಎಲ್ಲ ಪ್ರಕರಣಗಳನ್ನು ಮಾಡರ್ನಾ ಲಸಿಕೆ ತಡೆದಿದೆ ಎಂಬುದು ಲಸಿಕೆ ಬಗ್ಗೆ ಬಹಳ ಭರವಸೆ ಮೂಡಿಸಿದೆ. ಮಾಡರ್ನಾ ಲಸಿಕೆಯನ್ನು ಒಂದು ತಿಂಗಳ ಕಾಲ ಸಾಮಾನ್ಯ ಫ್ರಿಜ್ನಲ್ಲಿ ಸಂಗ್ರಹಿಸಿ ಇಡಬಹುದಾಗಿದ್ದು, ಲಸಿಕೆ ವಿತರಣೆ ಪ್ರಕ್ರಿಯೆ ಸಂದರ್ಭ ಅನುಕೂಲಕರವಾಗಿದೆ.
ಕಳೆದ ವಾರ ಫೈಝರ್ ಮತ್ತು ಜರ್ಮನಿಯ ಬಯೋನ್ಟೆಕ್ ತಮ್ಮ ಕೋವಿಡ್-19 ಲಸಿಕೆಯು ಶೇ.90ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಪ್ರಕಟಿಸಿದ್ದವು.
ಮಾಡರ್ನಾ ಲಸಿಕೆಯು ಫೈಝರ್ ಕಂಪೆನಿಯ ಲಸಿಕೆಗೆ ಹೋಲಿಸಿದರೆ ನಿಭಾಯಿಸುವ ನಿಟ್ಟಿನಲ್ಲೂ ಸುಲಭದ್ದಾಗಿದೆ. ಫೈಝರ್ ಲಸಿಕೆಯನ್ನು ಮೈನಸ್ 70ಡಿಗ್ರಿ ಸೆಲ್ಸಿಯಸ್ ತಂಪಿನಲ್ಲಿ ಸಂಗ್ರಹಿಸಬೇಕಾಗಿದ್ದು, ಲಸಿಕೆ ವಿತರಣೆ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಹಿನ್ನೆಡೆ ಎನ್ನಲಾಗುತ್ತಿದೆ.