ಅಮೇರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ಮೋದಿ ಫೋನ್ ಸಂಭಾಷಣೆ
ಭಾರತ ಅಮೇರಿಕ ನಡುವಿನ ಪ್ರಮುಖ ಪಾಲುದಾರಿಕೆ ಬದ್ಧತೆಯನ್ನು ಪುನರುಚ್ಛರಿಸಿದ್ದೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಬೈಡನ್ ಗೆಲುವು ಅಮೇರಿಕಾದಲ್ಲಿನ ಪ್ರಜಾಸತ್ತಾತ್ಮಕ ಸಂಪ್ರದಾಯದ ಬಲ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಇದು ಸಾಕ್ಷಿ ಎಂದು ಮೋದಿ ಬಣ್ಣಿಸಿದರು.
ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಅಮೇರಿಕ ನೂತನ ಅಧ್ಯಕ್ಷ ರಾಗಿ ಆಯ್ಕೆಯಾಗಿರುವ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ರಾತ್ರಿ ದೂರವಾಣಿ ಕರೆ ಮಾಡಿದ್ದು, ಈ ಸಂದರ್ಭ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಬೈಡನ್ ಗೆಲುವು ಅಮೇರಿಕದಲ್ಲಿನ ಪ್ರಜಾಸತ್ತಾತ್ಮಕ ಸಂಪ್ರದಾಯದ ಬಲ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಇದು ಸಾಕ್ಷಿ ಎಂದು ಮೋದಿ ಬಣ್ಣಿಸಿದರು.
ಭಾರತ ಅಮೇರಿಕ ನಡುವಿನ ಪ್ರಮುಖ ಪಾಲುದಾರಿಕೆ ಬದ್ಧತೆಯನ್ನು ಪುನರುಚ್ಛರಿಸಿದ್ದೇವೆ. ಕೋವಿಡ್-19, ಹವಾಮಾನ ಬದಲಾವಣೆ ಮತ್ತು ಇಂಡೋ-ಫೆಸಿಫಿಕ್ ಪ್ರದೇಶದ ಸಹಕಾರ ಸೇರಿದಂತೆ ನಮ್ಮ ಆದ್ಯತೆಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಅಮೇರಿಕ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಅವರನ್ನೂ ಮೋದಿ ಅಭಿನಂದಿಸಿದ್ದಾರೆ. ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.