ಭಟ್ಕಳ: ಡಯಾಲಿಸಿಸ್ ಕಟ್ಟಡ ಉದ್ಘಾಟಿಸಿದ ಶಾಸಕ ಸುನಿಲ್ ನಾಯ್ಕ್

45 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡಕ್ಕೆ ಹೆಸರನ್ನು ಹೇಳಬಯಸದೆ ದಾನವನ್ನು ನೀಡಿದ ದಾನಿಗಳಿಗೆ ಶಾಸಕರು ಧನ್ಯವಾದ ಸಲ್ಲಿಸಿದರು.

ತಾಯಿ ಮತ್ತು ಮಕ್ಕಳ ವಿಶೇಷ ಆರೈಕೆ ವಿಭಾಗ ಮತ್ತು ಹೊಸ ಜನನ ವಿಶೇಷ ಆರೈಕೆ ಘಟಕ ಮಂಜೂರುಗೊಂಡಿದ್ದು ಶೀಘ್ರದಲ್ಲಿ ಸೇವೆ ಆರಂಭ.

ಕರಾವಳಿ ಕರ್ನಾಟಕ ವರದಿ
ಭಟ್ಕಳ: ತಾಲೂಕು ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಡಯಾಲಿಸಿಸ್ ನೂತನ ಕಟ್ಟಡವನ್ನು ಶಾಸಕ ಸುನಿಲ್ ಬಿ. ನಾಯ್ಕ್ ಉದ್ಘಾಟಿಸಿದರು.

ಸುಮಾರು 45 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡಕ್ಕೆ ಹೆಸರನ್ನು ಹೇಳಬಯಸದೆ ದಾನವನ್ನು ನೀಡಿದ ದಾನಿಗಳಿಗೆ ಶಾಸಕರು ಧನ್ಯವಾದ ಸಲ್ಲಿಸಿದರು. ತಾಯಿ ಮತ್ತು ಮಕ್ಕಳ ವಿಶೇಷ ಆರೈಕೆ ವಿಭಾಗ ಮತ್ತು ಹೊಸ ಜನನ ವಿಶೇಷ ಆರೈಕೆ ಘಟಕ ಮಂಜೂರುಗೊಂಡಿದ್ದು ಶೀಘ್ರದಲ್ಲಿ ಸೇವೆ ಆರಂಭಿಸಲಿದೆ ಎಂದರು.

ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್, ಎ‌ಎಸ್ಪಿ ನಿಖಿಲ್ ಬಿ, ಪುರಸಭಾಧ್ಯಕ್ಷ ಮುಹಮ್ಮದ್ ಪರ್ವೇಝ್ ಕಾಸಿಮಜಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ವೇತಾ ಕಾಮತ್, ಜಾಲಿ ಪ.ಪಂ ಅಧ್ಯಕ್ಷೆ ಶಮೀಮ್ ಬಾನು ಈ ಸಂದರ್ಭ ಉಪಸ್ಥಿತರಿದ್ದರು.

Get real time updates directly on you device, subscribe now.