ಫುಟ್‌ಬಾಲ್ ದಂತಕತೆ ಡಿಯಾಗೊ ಮರಡೋನಾ ಹೃದಯ ಸ್ತಂಭನದಿಂದ ನಿಧನ

1986ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಇವರ ಒಂದು ಗೋಲ್ ಪ್ರಶಸ್ತಿಯನ್ನು ಅರ್ಜೆಂಟಿನಾ ಮುಡಿಗೇರಿಸಿತ್ತು. ತಂಡದಲ್ಲಿ ಅವರನ್ನು ‘ಹ್ಯಾಂಡ್ ಆಫ್ ಗಾಡ್’ ಎಂದೇ ಕರೆಯಲಾಗುತ್ತಿತ್ತು.

ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಮರಡೋನಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡು ವಾರ ಹಿಂದಷ್ಟೇ ಮನೆಗೆ ಮರಳಿದ್ದು, ಆರೋಗ್ಯ ಬಿಗಡಾಯಿಸಿತ್ತು.

ಕರಾವಳಿ ಕರ್ನಾಟಕ ವರದಿ
ಬ್ಯೂನಸ್ ಐರಿಸ್: ಫುಟ್‌ಬಾಲ್ ದಂತಕತೆ ಡಿಯಾಗೊ ಮರಡೋನಾ(60) ಹೃದಯ ಸ್ತಂಭನದಿಂದ ಬುಧವಾರ ಸಂಜೆ ನಿಧನ ಹೊಂದಿದ್ದಾರೆ.

ಮರಡೋನಾ ಅವರಿಂದಾಗಿ 1986ರಲ್ಲಿ ಅರ್ಜೆಂಟೀನಾ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು. ಪಶ್ಚಿಮ ಜರ್ಮನಿಯನ್ನು ಮಣಿಸಿ ಅರ್ಜೆಂಟಿನಾ ಚಾಂಪಿಯನ್ ಆಗಿತ್ತು.

ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ hand of god(ಹ್ಯಾಂಡ್ ಆಫ್ ಗಾಡ್’) ಎಂದೇ ಪ್ರಸಿದ್ಧವಾದ ವಿವಾದಿತ ಗೋಲ್ ಸೇರಿದಂತೆ ಎರಡು ಗೋಲುಗಳು ವಿಶ್ವ ಪ್ರಸಿದ್ಧಿ ಪಡೆದವು. ಎದುರಾಳಿ ತಂಡದ ಆರು ಆಟಗಾರರನ್ನು ಹಿಂದೆ ತಳ್ಳಿ ಹೊಡೆದ ಗೋಲ್ ‘ಶತಮಾನದ ಗೋಲ್’ ಎಂದೇ ಗುರುತಿಸಲ್ಪಟ್ಟಿದೆ.

ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಮರಡೋನಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡು ವಾರ ಹಿಂದಷ್ಟೇ ಮನೆಗೆ ಮರಳಿದ್ದು, ಆರೋಗ್ಯ ಬಿಗಡಾಯಿಸಿತ್ತು.

ಮರಡೋನಾ ನಿಧನ ವಾರ್ತೆಯನ್ನು ಅವರ ವಕೀಲರು ಧೃಢಪಡಿಸಿದ್ದಾರೆ.

Get real time updates directly on you device, subscribe now.