ಇಸ್ರೇಲ್: ಮುಂಬೈ 26/11 ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ

ಜೆರುಸಲೆಂ ರೆಹೋವೊತ್ ಹಾಗೂ ಟೆಲಾವೀವ್ ನಲ್ಲಿ  ಗೌರವ ಸಲ್ಲಿಸಲಾಯಿತು.

ಹುತಾತ್ಮರಾದ ಸೈನಿಕರು ಹಾಗೂ ನಾಗರಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕರಾವಳಿ ಕರ್ನಾಟಕ ವರದಿ
ರಾಮತ್-ಗನ್ (ಇಸ್ರೇಲ್): 26/11 ಮುಂಬೈ ದಾಳಿಯ ಹುತಾತ್ಮರಿಗೆ ಇಸ್ರೇಲ್ನ ಜೆರುಸಲೆಂ ರೆಹೋವೊತ್ ಹಾಗೂ ಟೆಲಾವೀವ್ ನಲ್ಲಿ ಬುದವಾರ ಸಂಜೆ  ಗೌರವ ಸಲ್ಲಿಸಲಾಯಿತು. ಬೆರ್ಶೇವಾ ಹಾಗೂ ಇಲಾತ್ ನಲ್ಲಿ ಇಂದು ಸಭೆ ಸೇರಲು ನಿರ್ಧರಿಸಲಾಗಿದೆ.

ನಿನ್ನೆ ನಡೆದ  ಸಭೆಯಲ್ಲಿ ಇಸ್ರೇಲ್ ಪ್ರಜೆಗಳೂ ಸೇರಿದಂತೆ ಭಾರತೀಯ ಮೂಲದ ವಿಧ್ಯಾರ್ಥಿಗಳು, ಕೇರ್ಗೀವರ್ಸ್  ಕೂಡಾ ಹಾಜರಿದ್ದರು.

ಕೊರೊನಾ ನಿಯಮಗಳಿಗೆ ಅನುಸಾರವಾಗಿ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಪಡೆದಿದ್ದು, ಮೊಂಬತ್ತಿ ಹಾಗೂ ಬ್ಯಾನರ್ ಹಿಡಿದು ಗೌರವ ಸಲ್ಲಿಸಲಾಯಿತು.

ಹುತಾತ್ಮರಾದ ಸೈನಿಕರು ಹಾಗೂ ನಾಗರಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂಧರ್ಭದಲ್ಲಿ ಈ ಸಭೆಗೆ ಹಾಜರಾಗಲು ಸಾಧ್ಯವಾಗದ ಮಂದಿಗೆ ಜೂಮ್ ಅ್ಯಪ್ ಮೂಲಕ ವೀಕ್ಷಿಸಲು ಅನುಕೂಲ ಮಾಡಲಾಗಿತ್ತು

Get real time updates directly on you device, subscribe now.