ನಾರ್ವೆ: ಫೈಝರ್ ಕೋವಿಡ್ ಲಸಿಕೆ ಪಡೆದ 23 ವೃದ್ಧರ ಸಾವು
ನಾರ್ವೆ ಸರಕಾರವು ವೃದ್ದರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡದಂತೆ ಈ ಹಿನ್ನೆಲೆಯಲ್ಲಿ ಸೂಚಿಸಿದೆ.
80ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ವ್ಯಕ್ತಿಗಳಿಗೆ ಲಸಿಕೆ ನೀಡದಿರುವಂತೆ ಸರಕಾರ ಎಚ್ಚರಿಕೆ ನೀಡಿದೆ.
ಕರಾವಳಿ ಕರ್ನಾಟಕ ವರದಿ
ಓಸ್ಲೋ: ನಾರ್ವೆಯಲ್ಲಿ ಫೈಝರ್- ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದ 23 ವೃದ್ಧರು ಸಾವಪ್ಪಿದ್ದಾರೆ. ಹದಿಮೂರು ಮಂದಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯಲ್ಲಿ ಲಸಿಕೆಯಿಂದಾದ ಅಡ್ಡ ಪರಿಣಾಮಗಳ ತೀವೃತೆಯೇ ಸಾವಿಗೆ ಕಾರಣ ಎಂದು ದೃಢಪಟ್ಟಿದೆ.
ನಾರ್ವೆ ಸರಕಾರವು ವೃದ್ದರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡದಂತೆ ಈ ಹಿನ್ನೆಲೆಯಲ್ಲಿ ಸೂಚಿಸಿದೆ.
80ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳ ಜೀವಿತಾವಧಿ ಕಡಿಮೆ ಇರುವುದರಿಂದ ಅವರಿಗೆ ಲಸಿಕೆ ನೀಡುವುದರಿಂದ ಪ್ರಯೋಜನವಾಗಲಿಕ್ಕಿಲ್ಲ ಎಂದಿರುವ ಸರಕಾರ ಈ ವಯೋಮಾನದ ವ್ಯಕ್ತಿಗಳಿಗೆ ಲಸಿಕೆ ನೀಡದಿರುವಂತೆ ಎಚ್ಚರಿಕೆ ನೀಡಿದೆ.
ಆರೋಗ್ಯವಂತ ವ್ಯಕ್ತಿಗಳು, ಯುವಜನರು ಲಸಿಕೆ ತೆಗೆದುಕೊಳ್ಳಬಹುದೆಂದು ಸರ್ಕಾರ ಹೇಳಿದೆ.
ಲಸಿಕೆ ಪಡೆದ 23 ಜನರು ಸಾವನ್ನಪ್ಪಿದ ಘಟನೆ ಬಗ್ಗೆ ಫೈಝರ್ ತನಿಖೆ ನಡೆಸುತ್ತಿದೆ.