ಕಾಸರಗೋಡು: ಟಿವಿ ಸ್ಟ್ಯಾಂಡ್ ಮೈಮೇಲೆ ಬಿದ್ದು ಮಗು ಮೃತ್ಯು
ಟಿವಿಯ ಕೇಬಲ್ ತಂತಿಯನ್ನು ಎಳೆದ ಸಂದರ್ಭ ಟಿವಿ ಸ್ಟ್ಯಾಂಡ್ ಸಹಿತ ಮಗುವಿನ ಮೇಲೆ ಬಿದ್ದಿದೆ.
ಮಗು ಶಾಕಿರ್, ನಿಸಾರ್ ಮತ್ತು ಫಾಯಿಝ ಅವರ ಏಕೈಕ ಪುತ್ರ.
ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಆಟವಾಡುತ್ತಿದ್ದ ಮಗುವಿನ ಮೇಲೆ ಟಿವಿ ಸ್ಟ್ಯಾಂಡ್ ಸಹಿತ ಬಿದ್ದಾಗ ಮಗು ಮೃತಪಟ್ಟ ಘಟನೆ ವರದಿಯಾಗಿದೆ. ಬೋವಿಕಾನ ಎಂಬಲ್ಲಿ ಘಟನೆ ನಡೆದಿದ್ದು, ತೆಕ್ಕಿಲ್ ಉಕ್ರಂಪಾಡಿಯ ನಿಸಾರ್ ಹಾಗೂ ಫಾಯಿಝ ಅವರ ಮಗ ಮಹ್ಮದ್ ಶಾಕಿರ್(2) ಸಾವಪ್ಪಿದ್ದಾನೆ.
ಟಿವಿಯ ಕೇಬಲ್ ತಂತಿಯನ್ನು ಎಳೆದ ಸಂದರ್ಭ ಟಿವಿ ಸ್ಟ್ಯಾಂಡ್ ಸಹಿತ ಮಗುವಿನ ಮೇಲೆ ಬಿದ್ದಿದೆ. ಶಬ್ದ ಕೇಳಿದೊಡನೆ ಧಾವಿಸಿ ಬಂದ ಮನೆಯವರು ಮಗುವನ್ನು ಕೂಡಲೇ ಕಾಸರಗೋಡು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.
ಮಗು ಶಾಕಿರ್, ನಿಸಾರ್ ಮತ್ತು ಫಾಯಿಝ ಅವರ ಏಕೈಕ ಪುತ್ರನಾಗಿದ್ದು, ಅಜ್ಜಿ ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿತ್ತು.