ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ

ರಾಜೀನಾಮೆ ನೀಡಿದ್ದಕ್ಕೆ ಯಾವುದೇ ಬೇಸರವಾಗಿಲ್ಲ. ಪಕ್ಷದಿಂದ ಒತ್ತಡ ಇರಲಿಲ್ಲ.

ಸದನದಲ್ಲಿ ಹೇಳಬೇಕಾಗಿರುವುದನ್ನು ಹೇಳಿದ್ದೇನೆ. ನನ್ನ ಕೆಲಸವನ್ನು ಚೆನ್ನಾಗಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಬಿಜೆಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಚರ್ಚೆಗೆ ಅವಕಾಶ ಕೊಡದ ಪ್ರತಾಪಚಂದ್ರ ಶೆಟ್ಟಿಯವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗುರುವಾರ ಸಂಜೆ ವಿದಾಯ ಭಾಷಣದ ಬಳಿಕ ಕಲಾಪವನ್ನು ಶುಕ್ರವಾರ ಹನ್ನೊಂದು ಗಂಟೆಗೆ ಮುಂದೂಡಿದ ಸಭಾಪತಿಯವರು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರಿಗೆ ರಾಜೀನಾಮೆ ಪತ್ರ ನೀಡಿದರು.

ರಾಜೀನಾಮೆ ನೀಡಿದ್ದಕ್ಕೆ ಯಾವುದೇ ಬೇಸರವಾಗಿಲ್ಲ. ಪಕ್ಷದಿಂದ ಒತ್ತಡ ಇರಲಿಲ್ಲ ಎಂದು ಪ್ರತಾಪಚಂದ್ರ ಶೆಟ್ಟಿ ತಿಳಿಸಿದ್ದಾರೆ. ಸದನದಲ್ಲಿ ಹೇಳಬೇಕಾಗಿರುವುದನ್ನು ಹೇಳಿದ್ದೇನೆ. ನನ್ನ ಕೆಲಸವನ್ನು ಚೆನ್ನಾಗಿ ಮಾಡಿದ್ದೇನೆ. ಬೇಸರ ಏನಿಲ್ಲ ಎಂದು ಹೇಳಿದ್ದಾರೆ.

Get real time updates directly on you device, subscribe now.