‘ಖಾಸಗಿ ದೇವಸ್ಥಾನಗಳ ಮೇಲೆ ಸರಕಾರ ಹಕ್ಕು ಚಲಾಯಿಸುವ ಪ್ರಶ್ನೆಯೇ ಇಲ್ಲ’: ಪೂಜಾರಿ

ನೊಂದಣಿ ನಿಯಮದ ಬಗ್ಗೆಯೂ ಜನ ಬಯಸಿದರೆ ಮರುಪರಿಶೀಲನೆಗೆ ಸಿದ್ದ ಎಂದು ಪೂಜಾರಿ ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ದೇವಸ್ಥಾನಗಳ ಮೇಲೆ ಮುಜರಾಯಿ ಇಲಾಖೆಯಿಂದ ಕಣ್ಗಾವಲು ಇಡುವ ಯಾವುದೇ ಚಿಂತನೆ ಇಲ್ಲ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಖಾಸಗಿ ದೇವಸ್ಥಾನಗಳ ಮೇಲೆ ಸರಕಾರ ಹಕ್ಕು ಚಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ನಲ್ಲಿ ಸ್ಪಷ್ಟ ಪಡಿಸಿದ್ದಾರೆ. ಖಾಸಗಿ ದೇವಸ್ಥಾನಗಳ ಮೇಲೆ ಮುಜರಾಯಿ ಇಲಾಖೆಯಿಂದ ಕಣ್ಗಾವಲು ಇಡುವ ಯಾವುದೇ ಚಿಂತನೆ ಇಲ್ಲ. ಖಾಸಗಿ ದೇವಳಗಳನ್ನು ನೊಂದಣಿ ಮಾಡಿಸಬೇಕೆಂಬ ನಿಯಮ 2015ರಿಂದ ಜಾರಿಯಲ್ಲಿದೆ. ಪ್ರತೀವರ್ಷದಂತೆ ಈ ಬಾರಿಯೂ ನೆನಪೋಲೆ ರವಾನಿಸಲಾಗಿರುವುದನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಸಚಿವ ಪೂಜಾರಿ ಹೇಳಿದರು.

ಬಿಜೆಪಿಯ ಸುನಿಲ್ ಸುಬ್ರಮಣಿ ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಸಚಿವರು ಉತ್ತರಿಸುತ್ತಿದ್ದರು.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಿಂದ ಹೊರಗಿರುವ ದೇವಸ್ಥಾನಗಳ ನೊಂದಣಿಗಾಗಿ ನಿಯಮ ಜಾರಿಯಲ್ಲಿದೆ. ದೇವಸ್ಥಾನಗಳ ಸ್ಥಿರ ಮತ್ತು ಚರ ಆಸ್ತಿ ಮಾಹಿತಿ ನೊಂದಣಿ ಸಮಯ ನೀಡಬೇಕೆಂದು ನಿಯಮದಲ್ಲಿದೆ. ನೊಂದಣಿ ನಿಯಮದ ಬಗ್ಗೆಯೂ ಜನ ಬಯಸಿದರೆ ಮರುಪರಿಶೀಲನೆಗೆ ಸಿದ್ದ ಎಂದು ಪೂಜಾರಿ ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

 

Get real time updates directly on you device, subscribe now.