ಸೌದಿ ಅರೇಬಿಯಾ: ದೇಶ ತೊರೆದವರ ರೀ ಎಂಟ್ರಿ ವೀಸಾ ಅವಧಿ ವಿಸ್ತರಣೆ

ಹತ್ತು ತಿಂಗಳಿಂದೀಚೆಗೆ ಕೋವಿಡ್ ಲಾಕ್ ಡೌನ್ ಸಂದರ್ಭ ಸೌದಿಯಿಂದ ಸ್ವದೇಶಕ್ಕೆ ಬಂದವರಿಗೆ ಬಿಗ್ ರಿಲೀಫ್

ಉದ್ಯೋಗದಾತನ ಮೂಲಕ ಅಥವಾ ಮಕೀಮ್ ಮೂಲಕ ಆನ್‌ಲೈನ್‌ನಲ್ಲಿ (SADAD ಪಾವತಿ ಪದ್ಧತಿಯಲ್ಲಿ)ಶುಲ್ಕ ಪಾವತಿ.

ಕರಾವಳಿ ಕರ್ನಾಟಕ ವರದಿ
ರಿಯಾದ್: ಮಾರ್ಚ್2020ರಿಂದ ಸೌದಿ ಅರೇಬಿಯಾದಿಂದ ಸ್ವದೇಶಕ್ಕೆ ಮರಳಿದವರ ಎಕ್ಸಿಟ್/ರೀ ಎಂಟ್ರಿ ವೀಸಾವನ್ನು ಉದ್ಯೋಗದಾತನ ಮೂಲಕ ಅಥವಾ ಮಕೀಮ್ ಮೂಲಕ ಆನ್‌ಲೈನ್‌ನಲ್ಲಿ (SADAD ಪಾವತಿ ಪದ್ಧತಿಯಲ್ಲಿ)ಶುಲ್ಕ ಪಾವತಿಸಿ ವಿಸ್ತರಿಸಲು ಸೌದಿ ಅರೇಬಿಯಾದ ಪಾಸ್‌ಫೋರ್ಟ್ ಸೇವಾ ಪ್ರಾಧಿಕಾರೆ( ಝವಾಝತ್) ಅನುವು ಮಾಡಿಕೊಟ್ಟಿದೆ. ವೀಸಾ ಅವಧಿ ವಿಸ್ತರಣೆ ಸ್ವಯಂಚಾಲಿತವಾಗಿ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಇದರಿಂದ ಸುಮಾರು ಹತ್ತು ತಿಂಗಳಿಂದೀಚೆಗೆ ಕೋವಿಡ್ ಲಾಕ್ ಡೌನ್ ಸಂದರ್ಭ ಸೌದಿಯಿಂದ ಸ್ವದೇಶಕ್ಕೆ ಬಂದವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ವೀಸಾ ಅವಧಿ ಮುಗಿದು 180ಕ್ಕೂ ಅಧಿಕ ದಿನಗಳಾಗಿದ್ದರೆ ಈ ಬಗ್ಗೆ ಸೂಕ್ತ ಮಾಹಿತಿಗಾಗಿ ಸೌದಿಯ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಬಹುದಾಗಿದೆ. ವಿದೇಶಾಂಗ ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಸಂಬಂಧಿತ ಲಿಂಕ್ ಬಳಸಿ ಉದ್ಯೋಗದಾತರು ಅಥವಾ ಕುಟುಂಬದ ಮುಖ್ಯಸ್ಥರು ವೀಸಾ ವಿಸ್ತರಿಸಿಕೊಳ್ಳಬಹುದಾಗಿದೆ.

ಹೊಸ ವರ್ಕ್ ವೀಸಾದೊಂದಿಗೆ ವಾಪಾಸ್ ಬಂದವರಿಗೆ ಈ ನಿರ್ಬಂಧ ಅನ್ವಯಿಸದು.

ನಿರ್ಗಮನ(ಎಕ್ಸಿಟ್) ಮತ್ತು ರೀ ಎಂಟ್ರಿ(ಆಗಮನ) ವೀಸಾದಲ್ಲಿ ಲಾಕ್ ಡೌನ್ ಸಂದರ್ಭ ವರ್ಷದ ಹಿಂದೆ ತಮ್ಮ ದೇಶಗಳಿಗೆ ತೆರಳಿ ಮರಳಿ ಬಾರದವರಿಗೆ ಇದರಿಂದ ಅನುಕೂಲವಾಗಲಿದೆ.

ಕೊರೋನಾ ಭೀತಿ: ಇಪ್ಪತ್ತು ದೇಶಗಳ ಪ್ರಜೆಗಳ ಪ್ರವೇಶ ನಿರ್ಬಂಧ

ಭಾರತ ಸೇರಿದಂತೆ ಇಪ್ಪತ್ತು ದೇಶಗಳ ಪ್ರಜೆಗಳು ಸೌದಿ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ಸೌದಿ ಕೈಗೊಂಡಿದೆ.

Get real time updates directly on you device, subscribe now.