12,110 ಕೋಟಿ ರೂ. ಕೃಷಿ ಸಾಲ ಮನ್ನಾ: ತಮಿಳುನಾಡು ಮುಖ್ಯಮಂತ್ರಿ ಘೋಷಣೆ
ರಾಜ್ಯದ 16.43ಲಕ್ಷ ರೈತರಿಗೆ ಸಾಲ ಮನ್ನಾ ಯೋಜನೆಯಿಂದ ಲಾಭವಾಗಲಿದೆ.
ಭರವಸೆಗಳನ್ನು ಈಡೇರಿಸುವ ಏಕೈಕ ಪಕ್ಷ ಎಐಡಿಎಂಕೆ ಮಾತ್ರ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಚೆನ್ನೈ: 12,110ಕೋ. ರೂ. ಮೊತ್ತದ ಕೃಷಿ ಸಾಲ ಮನ್ನಾಗೈಯುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಯೋಜನೆ ತಕ್ಷಣವೇ ಜಾರಿಯಾಗಲಿದ್ದು, ರಾಜ್ಯದ 16.43ಲಕ್ಷ ರೈತರಿಗೆ ಸಾಲ ಮನ್ನಾ ಯೋಜನೆಯಿಂದ ಲಾಭವಾಗಲಿದೆ ಎಂದು ಸಿಎಂ ಹೇಳಿದರು.
ರೈತರಿಗೆ ತಲಾ ಎರಡು ಎಕರೆ ಜಮೀನು ನೀಡುವುದಾಗಿ ಡಿಎಂಕೆ ಘೋಷಿಸಿದ್ದು ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದ ಮುಖ್ಯಮಂತ್ರಿ ಭರವಸೆಗಳನ್ನು ಈಡೇರಿಸುವ ಏಕೈಕ ಪಕ್ಷ ಎಐಡಿಎಂಕೆ ಮಾತ್ರ ಎಂದು ಹೇಳಿದ್ದಾರೆ.