‘ಗುಜರಾತಿಗಳಿಗೆ ಮಾರಿಕೊಂಡವರು ನನ್ನನ್ನು ಹೊರಗಿನವಳು ಎನ್ನುತ್ತಿದ್ದಾರೆ’

ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಟೀಕೆಗೆ ಮಮತಾ ಚಾಟಿ.

ನಾನು ಪಶ್ಚಿಮ ಬಂಗಾಳದ ಮನೆಮಗಳಾಗಿರದಿದ್ದರೆ ಹತ್ತು ವರ್ಷ ಆಡಳಿತ ನಡೆಸಲು ಸಾಧ್ಯವಿರಲಿಲ್ಲ.

ಕರಾವಳಿ ಕರ್ನಾಟಕ ವರದಿ
ನಂದಿಗ್ರಾಮ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ‘ಹೊರಗಿನವರು’ ಎಂದು ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಹೇಳಿರುವುದಕ್ಕೆ ಮಮತಾ ಚಾಟಿ ಬೀಸಿದ್ದಾರೆ.

ಹೊರಗಿನ ಗುಜರಾತಿಗಳಿಗೆ ತಮ್ಮ ಆತ್ಮವನ್ನು ಮಾರಿಕೊಂಡವರು ನನ್ನನ್ನು ಈಗ ಹೊರಗಿನವಳು ಎಂದು ಕರೆಯುತ್ತಿದ್ದಾರೆ. ಇವರಿಗೆ ಈಗ ನಾನು ಹೊರಗಿನವಳಾಗಿದ್ದೇನೆ. ಗುಜರಾತಿನಿಂದ ಬಂದವರು ಇವರಿಗೆ ಈ ನೆಲದ ಮಂದಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ನಂದಿಗ್ರಾಮದ ಜನ ಹೇಳಲಿ, ನಾನು ಇಲ್ಲಿಂದ ಹೋಗುತ್ತೇನೆ. ನಾನು ಪಶ್ಚಿಮ ಬಂಗಾಳದ ಮನೆಮಗಳಾಗಿರದಿದ್ದರೆ ಹತ್ತು ವರ್ಷ ಆಡಳಿತ ನಡೆಸಲು ಸಾಧ್ಯವಿರಲಿಲ್ಲ ಎಂದು ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

Get real time updates directly on you device, subscribe now.