ಬಾಲಕಿ ಅತ್ಯಾಚಾರ: ಅಪರಾಧಿಗೆ ಜೀವಾವಧಿ ಶಿಕ್ಷೆ
ಹದಿನಾರು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ.
ಬಾಲಕಿ ಅಪಹರಣಕ್ಕಾಗಿ ಅಪರಾಧಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ.
ಕರಾವಳಿ ಕರ್ನಾಟಕ ವರದಿ
ಬಲ್ಲಿಯಾ: ಹದಿನಾರು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲಾ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪೊಕ್ಸೊ ಕಾಯ್ದೆ ಅನ್ವಯ ನ್ಯಾಯಾಧೀಶ ಶಿವಕುಮಾರ್ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಆದೇಶ ನೀಡಿದ್ದಾರೆ.
ಬಾಲಕಿ ಅಪಹರಣಕ್ಕಾಗಿ ಅಪರಾಧಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ, ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಮತ್ತು ಪೊಕ್ಸೊ ಕಾಯ್ದೆಯಡಿ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಜುಲೈ1, 2018ರಲ್ಲಿ ಚಿಟ್ ಬಡ್ಲಾವ್ ಹಳ್ಳಿಯೊಂದರಲ್ಲಿ ಬಾಲಕಿಯನ್ನು ಸಾಹ್ನಿ ಎಂಬಾತ ಅತ್ಯಾಚಾರಗೈದ ಬಗ್ಗೆ ಬಾಲಕಿಯ ತಂದೆ ಪೊಲೀಸ್ ದೂರು ನೀಡಿದ್ದರು.