ಉಳ್ಳಾಲ: ನೇಣು ಬಿಗಿದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಪತ್ತೆ
ತಾಯಿ ಮಧ್ಯಾಹ್ನ ಊಟದ ಸಮಯ ಮನೆಗೆ ಬಂದಾಗ ಮನೆಯಲ್ಲಿ ಪ್ರೇಕ್ಷಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯರು ಪ್ರೇಕ್ಷಾ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಮಂಗಳೂರು: ಯುವತಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಕುಂಪಲ ಆಶ್ರಯ ಕಾಲನಿಯಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಚಿತ್ತಪ್ರಸಾದ್ ಎಂಬವರ ಮಗಳು ಪ್ರೇಕ್ಷಾ(20) ಎಂದು ಮೃತ ಯುವತಿಯನ್ನು ಗುರುತಿಸಲಾಗಿದೆ.
ಅಂಗನವಾಡಿಗೆ ಹೋಗಿದ್ದ ತಾಯಿ ಮಧ್ಯಾಹ್ನ ಊಟದ ಸಮಯ ಮನೆಗೆ ಬಂದಾಗ ಮನೆಯಲ್ಲಿ ಪ್ರೇಕ್ಷಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರೇಕ್ಷಾ ಅವರು ನಂತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಆಕೆ ಇಂದು ರಾತ್ರಿ ಫೋಟೋಶೂಟ್ಗಾಗಿ ಬೆಂಗಳೂರಿಗೆ ತೆರಳುವವರಿದ್ದರು ಎನ್ನಲಾಗಿದೆ. ಸ್ಥಳೀಯರು ಪ್ರೇಕ್ಷಾ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.