ಮಹಿಳೆಯರಿಗೆ ಜೀನ್ಸ್ ನಿಷೇಧಿಸಿದ ಉ.ಪ್ರದೇಶ ಖಾಪ್ ಪಂಚಾಯತ್
ಪಂಚಾಯತ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವ ಉತ್ತರ ಪ್ರದೇಶ ಸರಕಾರದ ನಿರ್ಧಾರವನ್ನೂ ಖಾಪ್ ಪಂಚಾಯತ್ ವಿರೋಧಿಸಿದೆ.
ಜೀನ್ಸ್ ಪಾಶ್ಚಾತ್ಯ ಸಂಸ್ಕೃತಿಯ ಉಡುಗೆಯಾಗಿದೆ. ಮಹಿಳೆಯರು ಸೀರೆ, ಸಲ್ವಾರ್ ಕಮೀಜ್, ಗಾಗ್ರಾ ಧರಿಸಬೇಕು.
ಕರಾವಳಿ ಕರ್ನಾಟಕ ವರದಿ
ಮುಜಾಫರ್ ನಗರ: ಜಿಲ್ಲೆಯ ರಜಪೂತ್ ಸಮುದಾಯದ ಖಾಪ್ ಪಂಚಾಯತ್ ಮಹಿಳೆಯರು ಜೀನ್ಸ್ ತೊಡುವುದನ್ನು ಮತ್ತು ಪುರುಷರು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಿದೆ.
ಜೀನ್ಸ್ ಪಾಶ್ಚಾತ್ಯ ಸಂಸ್ಕೃತಿಯ ಉಡುಗೆಯಾಗಿದೆ. ಮಹಿಳೆಯರು ಸೀರೆ, ಸಲ್ವಾರ್ ಕಮೀಜ್, ಗಾಗ್ರಾ ಧರಿಸಬೇಕು. ಪುರುಷರು ಶಾರ್ಟ್ಸ್ ಧರಿಸಕೂಡದು. ಈ ನಿರ್ಬಂಧ ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲಾಗುತ್ತದೆ ಮತ್ತು ಸಮುದಾಯದಿಂದ ಬಹಿಷ್ಕಾರ ಹಾಕಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಛಾತ್ರ್‌ಪಾಲ್ ಠಾಣಾ ವ್ಯಾಪ್ತಿಯ ಪಿಪಲ್ ಗ್ರಾಮದಲ್ಲಿ ಕರೆಯಲಾದ ಪಂಚಾಯತ್ ಸಭೆಯಲ್ಲಿ ಖಾಪ್ ಪಂಚಾಯತ್ ನಿರ್ಣಯವನ್ನು ಸಮುದಾಯದ ಮುಖಂಡ ಠಾಕೂರ್ ಪುರಣ್ ಸಿಂಗ್ ತಿಳಿಸಿದ್ದಾರೆ.
ಪಂಚಾಯತ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವ ಉತ್ತರ ಪ್ರದೇಶ ಸರಕಾರದ ನಿರ್ಧಾರವನ್ನೂ ಖಾಪ್ ಪಂಚಾಯತ್ ವಿರೋಧಿಸಿದೆ.