ರೈತ ಮಹಾ ಪಂಚಾಯತ್’ನಲ್ಲಿ ಐವತ್ತು ಸಾವಿರ ಜನ ಸೇರಿಸಿ ನಮ್ಮ ವಿರೋಧ ತೋರಿಸಬೇಕು: ಕೆ.ಎಲ್.ಅಶೋಕ್

ಈಗಾಗಲೇ ನಡುಗಿರುವ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಾವು ವಿರಮಿಸಬಾರದು.

ಭಾರತದಲ್ಲಿ ಪ್ಯಾಸಿಸ್ಟರ ಸುನಾಮಿ ಆಡಳಿತ ಹಿಮ್ಮೆಟ್ಟಿಸಬೇಕಾದರೆ ವಿವಿಧ ಹೋರಾಟದ ಧಾರೆಗಳು ಒಟ್ಟಾಗಿ ನುಗ್ಗಬೇಕು ಎಂದು ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ . ಅಶೋಕ್ ಕರೆ ನೀಡಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಸಾಗರ: ಮಾರ್ಚ್ 20ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆಯಲಿರುವ ರೈತರ ಮಹಾ ಪಂಚಾಯತ್’ನಲ್ಲಿ ಸುಮಾರು ಐವತ್ತು ಸಾವಿರ ಜನ ಸೇರಿಸಿ ನಮ್ಮ ವಿರೋಧ ತೋರಿಸಬೇಕು. ಈಗಾಗಲೇ ನಡುಗಿರುವ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಾವು ವಿರಮಿಸಬಾರದು ಎಂದು ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ .ಅಶೋಕ್ ಅವರು ಕರೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾರ್ಚ್ 20ಕ್ಕೆ ಸೈನ್ಸ್ ಮೈದಾನದಲ್ಲಿ ಹಮ್ಮಿಕೊಂಡಿರುವ ರೈತ ಮಹಾಪಂಚಾಯತ್ ಬಗ್ಗೆ ಸಾಗರ ತಾಲ್ಲೂಕಿನಲ್ಲಿ ಅನೇಕ ಸಂಘಟನೆಗಳ ಮುಖಂಡರ ಜೊತೆ ನಡೆಸಲಾದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಕ್ರಾಂತಿ ನಡೆದದ್ದು ರಷ್ಯಾ ಮತ್ತು ಚೀನಾದಲ್ಲಿ. ಆದರೆ ಇದೇ ಮೊದಲ ಬಾರಿ ಭಾರತದ ದೆಹಲಿಯಲ್ಲಿ ಇಂತಹ ಹೋರಾಟ ನಡೆಯುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ರೈತ ಚಳುವಳಿ ದೇಶವನ್ನು ಉಳಿಸುವ ಚಳುವಳಿಯಾಗಿದೆ. ಈ ಕಾರಣದಿಂದ ಉತ್ತರದ ಹೋರಾಟ ದಕ್ಷಿಣಕ್ಕೆ ಬರುತ್ತಿದೆ ಇದಕ್ಕೆ ನಾವು ಒಂದಾಗಬೇಕು ಎಂದು ಅಶೋಕ್ ಹೋರಾಟದ ಮಹತ್ವದ ಬಗ್ಗೆ ಹೇಳಿದರು. ಭಾರತದಲ್ಲಿ ಪ್ಯಾಸಿಸ್ಟರ ಸುನಾಮಿ ಆಡಳಿತ ಹಿಮ್ಮೆಟ್ಟಿಸಬೇಕಾದರೆ ವಿವಿಧ ಹೋರಾಟದ ಧಾರೆಗಳು ಒಟ್ಟಾಗಿ ನುಗ್ಗಬೇಕು ಎಂದರು.

ಸಮಾಜವಾದಿ ನೆಲೆಗಟ್ಟಿನಲ್ಲಿ ಕಟ್ಟಿದಂಥ ದೇಶವಾದ ಭಾರತದ ವ್ಯವಸ್ಥೆ ಬುಡಮೇಲು ಮಾಡುತ್ತಿರುವ ಮೋದಿಯದು ಹುಚ್ಚುತನದ ಪರಮಾವಧಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಹೆಚ್. ಆರ್ ಬಸವರಾಜಪ್ಪ, ರೈತ ಮುಖಂಡರಾದ ಕೆ.ಟಿ ಗಂಗಾಧರ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷರಾದ ಎಸ್.ಶಿವಮೂರ್ತಿ, ಪತ್ರಕರ್ತ ಎಚ್.ಬಿ. ರಾಘವೇಂದ್ರ, ಪರಮೇಶ್ವರ್ ದೂಗೂರು ರವಿಕುಗ್ವೆ, ಜಯಂತ್, ಚಂದ್ರಶೇಖರ್, ಮಾಜಿ ಜಿಪಂ ಸದಸ್ಯ ಹೊನಗೋಡು ರತ್ನಾಕರ್ ಇನ್ನೂ ಅನೇಕ ಮುಖಂಡರು ಭಾಗಿಯಾಗಿದ್ದರು.

ಎಪಿಎಂಸಿ ಸದಸ್ಯ ಭರ್ಮಪ್ಪ‌ಅಂದಾಸುರ, ಕಾಂಗ್ರೆಸ್ ಮುಖಂಡ ಬಿ.ಆರ್. ಜಯಂತ್, ಕಬಸೆ ಅಶೋಕ ಮೂರ್ತಿ, ಬಸವರಾಜಪ್ಪ ಗೌಡ,  ಗುರುಮೂರ್ತಿ, ಚಂದ್ರಶೇಖರ್ ಸಿರಿವಂತೆ, ಸುಧಾಕರ ಕುಗ್ವೆ,  ಆರೋಡಿ ಲಿಂಗರಾಜ್, ಅ.ರಾ. ಶ್ರೀನಿವಾಸ, ಚಂದ್ರಶೇಖರ್ ಗೂರಲಕೆರೆ, ಎಲ್ ಕೆ ಪುರ್ಣಿಮಾ ನವಿಲೆಮನೆ ಹೋರಾಟದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

Get real time updates directly on you device, subscribe now.