ಮೂಡುಬಿದಿರೆ: ತಂದೆ ಚಲಾಯಿಸುತ್ತಿದ್ದ ಟ್ರಕ್ ಅಡಿ ಸಿಲುಕಿದ ಬಾಲಕ ಮೃತ್ಯು

ಬಾಲಕ ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದ.

ಕಲ್ಲಿನಕೋರೆಗೆ ಹೋದ ಸಂದರ್ಭ ತಂದೆ ಲಾರಿ ಚಲಾಯಿಸಿದ ಸಂದರ್ಭ ಬಾಲಕ ಆಕಸ್ಮಿಕವಾಗಿ ಚಕ್ರದಡಿ ಸಿಲುಕಿ ಸಾವಪ್ಪಿದ್ದಾನೆ

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ತಂದೆಯೇ ಚಲಾಯಿಸುತ್ತಿದ್ದ ಟ್ರಕ್ ಚಕ್ರದಡಿ ಸಿಲುಕಿದ ಬಾಲಕ ಮೃತಪಟ್ಟ ಘಟನೆ ಬುಧವಾರ ಸಂಜೆ ವರದಿಯಾಗಿದೆ. ಉಜಿರೆ ಅತ್ತಾಜೆಯ ಇಬ್ರಾಹಿಂ ಇಬ್ಬಿ ಅವರ ಮಗ ಮುರ್ಷಿದ್(8) ಸಾವಪ್ಪಿದ್ದಾನೆ.

ಬಾಲಕ ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದ.

ತಂದೆಯೊಂದಿಗೆ ಮೂಡುಬಿದಿರೆಯ ಕಲ್ಲಿನಕೋರೆಗೆ ಹೋದ ಸಂದರ್ಭ ತಂದೆ ಲಾರಿ ಚಲಾಯಿಸಿದ ಸಂದರ್ಭ ಬಾಲಕ ಆಕಸ್ಮಿಕವಾಗಿ ಚಕ್ರದಡಿ ಸಿಲುಕಿ ಸಾವಪ್ಪಿದ್ದಾನೆ. ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದ. ಮರಣೋತ್ತರ ಪರೀಕ್ಷೆ ಬಳಿಕ ಉಜಿರೆ ಮಸ್ಜಿದ್ ದಪನ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಧ್ಯರಾತ್ರಿ ಬಳಿಕ ನಡೆಸಲಾಯಿತು.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

 

Get real time updates directly on you device, subscribe now.