ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ: ಮೂವರು ಪೊಲೀಸ್ ವಶಕ್ಕೆ

ಪ್ರೇಕ್ಷಾ ಅವರು ಕೊಲೆಯಾಗಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಪ್ರೇಕ್ಷಾ ಮನೆ ಬಳಿ ಈ ಮೂವರು ಸುತ್ತಾಡಿದ್ದರು ಎಂಬ ಬಗ್ಗೆ ಸ್ಥಳಿಯರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಳ್ಳಾಲ: ‘ಟೀನ್ ತುಳುನಾಡ್-2020’ ಅಂತಿಮ-5 ಫೈನಲಿಸ್ಟ್‌ಗಳಲ್ಲಿ ಓರ್ವರಾಗಿದ್ದ, ಕುಂಪಲ ಆಶ್ರಯ ಕಾಲನಿಯ ಪ್ರೇಕ್ಷಾ(20) ಅವರ ಮೃತದೇಹ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರೇಕ್ಷಾ ಅವರ ಸ್ನೇಹಿತನಾಗಿದ್ದ ಮುಂಡೋಳಿಯ ಯತೀನ್ ರಾಜ್ ಮತ್ತು ಆಸ್ರಯ ಕಾಲನಿಯ ಸೌರಭ್ ಮತ್ತು ಸುಹಾನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೇಕ್ಷಾ ಮನೆ ಬಳಿ ಈ ಮೂವರು ಸುತ್ತಾಡಿದ್ದರು ಎಂಬ ಬಗ್ಗೆ ಸ್ಥಳಿಯರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯಾಗಿರುವ ಕವಿತಾ ಮತ್ತು ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಚಿತ್ತಪ್ರಸಾದ್ ದಂಪತಿಯ ಪುತ್ರಿ ಪ್ರೇಕ್ಷಾ ಅವರು ಕೊಲೆಯಾಗಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯಾದ ತಾಯಿ ಕವಿತಾ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಮುಂದಿನ ಬಾಗಿಲು ಮುಚ್ಚಿತ್ತು. ಹಿಂದಿನ ಬಾಗಿಲಿನಿಂದ ಮನೆ ಒಳಗೆ ಹೋದಾಗ ಕೋಣೆಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಕ್ಷಾ ಮೃತಪಟ್ಟಿದ್ದಳು ಎಂದು ತಾಯಿ ಮಾಹಿತಿ ನೀಡಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಉಳ್ಳಾಲ ಠಾಣಾಧಿಕಾರಿ ಸಂದೀಪ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.