‘ನನ್ನ ತಾಯಿ ಕೋವಿಡ್ ಲಸಿಕೆ ಪಡೆದಿದ್ದಾರೆ’: ಪ್ರಧಾನಿ ನರೇಂದ್ರ ಮೋದಿ
ಲಸಿಕೆಗಳ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಂದ ಲಸಿಕೆ ಪಡೆಯಲು ಜನ ಮುಂದಾಗುತ್ತಿಲ್ಲ.
ಜನರನ್ನು ಲಸಿಕೆ ಪಡೆಯುವಂತೆ ಪ್ರೇರೇಪಿಸಲು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್.
ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ನನ್ನ ತಾಯಿ ಇಂದು ಕೋವಿಡ್-19 ಲಸಿಕೆಯ ಪ್ರಥಮ ಡೋಸ್ ಪಡೆದಿದ್ದಾರೆ ಎಂಬುದನ್ನು ಹೇಳಲು ಖುಶಿಯಾಗುತ್ತಿದೆ. ಲಸಿಕೆ ಪಡೆಯಲು ಯೋಗ್ಯರಾದ ಜನರನ್ನು ಲಸಿಕೆ ಪಡೆಯುವಂತೆ ಪ್ರೇರೇಪಿಸಲು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ನಲವತ್ತೈದು ವರ್ಷಕ್ಕಿಂತ ಮೇಲಿನ ಆರೋಗ್ಯ ಸಮಸ್ಯೆ ಹೊಂದಿರುವ ಜನರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯುವಂತೆ ಕೇಂದ್ರ ಸರಕಾರ ಸೂಚಿಸಿದೆ.
ಅನೇಕ ಮಂದಿ ಲಸಿಕೆಗಳ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳಿಂದ ಲಸಿಕೆ ಪಡೆಯಲು ಮುಂದಾಗುತ್ತಿಲ್ಲ. ಹಿರಿಯ ನಾಗರಿಕರಲ್ಲೂ ಲಸಿಕೆ ಪಡೆಯುವ ಉತ್ಸಾಹ ಈ ಹಿನ್ನೆಲೆಯಲ್ಲಿ ಕಂಡುಬರುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ತನ್ನ ವೃದ್ಧ ತಾಯಿ ಲಸಿಕೆ ಪಡೆದಿರುವ ವಿಚಾರ ತಿಳಿಸಿ ಲಸಿಕೆ ಪಡೆಯುವಂತೆ ಜನರನ್ನು ಕೋರಿರುವುದು ಈ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.