ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಇದು ಜಮಾಅತೆ ಇಸ್ಲಾಮಿ ಹಿಂದ್' ವತಿಯಿಂದ ಒದಗಿಸಲಾಗುತ್ತಿರುವ ಹದಿನೈದನೆಯ ಮನೆ.

ಕಾಪು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಅನ್ವರ್ ಅಲಿ ಕಾಪುರವರು ಮನೆಯ ಮಾಲಿಕರಾದ ಚಂದ್ರಶೇಖರ್ ಅವರಿಗೆ ಕೀಲಿ ಕೈ ನೀಡುವ ಮುಖಾಂತರ ಹಸ್ತಾಂತರ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಇದರ ತೋನ್ಸೆ – ಹೂಡೆ ಶಾಖೆಯ ವತಿಯಿಂದ ಸೂರಿಲ್ಲದವರಿಗೆ ಸೂರು ಒದಗಿಸುವ ನಿರಂತರ ಪ್ರಯತ್ನದಂತೆ ಪಡುತೋನ್ಸೆ ಬೆಂಗ್ರೆಯ ಚಂದ್ರಶೇಖರ ಅವರಿಗೆ ಮನೆಯನ್ನು ಸಂಪೂರ್ಣಗೊಳಿಸಿ ಹಸ್ತಾಂತರಿಸಲಾಯಿತು. ಇದು ಜಮಾಅತೆ ಇಸ್ಲಾಮಿ ಹಿಂದ್’ನ ವತಿಯಿಂದ ಒದಗಿಸಲಾಗುತ್ತಿರುವ ಹದಿನೈದನೆಯ ಮನೆ.

ಕೆಲವು ವರ್ಷಗಳಿಂದ ಅರ್ಥಿಕ ಸಂಕಷ್ಟದಿಂದಾಗಿ ಅಪೂರ್ಣ ಸ್ಥಿತಿಯಲ್ಲಿದ್ದ ಚಂದ್ರಶೇಖರ್ ಅವರ ಮನೆಯನ್ನು ಸಂಘಟನೆಯ ವತಿಯಿಂದ ಪೂರ್ಣಗೊಳಿಸಿ ಹಸ್ತಾಂತರಿಸಲಾಯಿತು.ಮನೆ ಹಸ್ತಾಂತರವನ್ನು ಕಾಪು ಜಮಾಅತೆ ಇಸ್ಲಾಮಿ ಹಿಂದ್ ನ ಅಧ್ಯಕ್ಷರಾದ ಅನ್ವರ್ ಅಲಿ ಕಾಪುರವರು ಮನೆಯ ಮಾಲಿಕರಾದ ಚಂದ್ರಶೇಖರ್ ಅವರಿಗೆ ಕೀಲಿ ಕೈ ನೀಡುವ ಮುಖಾಂತರ ನೆರೆವೇರಿಸಿದರು.

ಈ ಸಂದರ್ಭದಲ್ಲಿ ಚೇರ್ಕಾಡಿ ಪಂಚಾಯತ್ ಪಿ.ಡಿ.ಓ ಸುಭಾಶ್, ತೋನ್ಸೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ದಿನಕರ್ ಬೆಂಗ್ರೆ, ಜೆ.ಐ.ಎಚ್ ಹೂಡೆ ಘಟಕದ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್,ತೋನ್ಸೆ ಪಂಚಾಯತ್ ಉಪಾಧ್ಯಕ್ಷರಾದ ನಿತ್ಯನಂದ ಕೆಮ್ಮಣ್ಣು,ತೋನ್ಸೆ ಪಂಚಾಯತ್ ಸದಸ್ಯರಾದ  ಇದ್ರಿಸ್ ಹೂಡೆ, ವಿಜಯ, ಪ್ರತಿಭಾ, ಜಮೀಲಾ ಸದೀದಾ, ಮಹೇಶ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.