ವಿಜಯನಗರ: ಐತಿಹಾಸಿಕ ಹಂಪಿ ಕೋಟೆಯ ಗೋಡೆ ಕುಸಿತ
ಈ ಘಟನೆಯಲ್ಲಿ ಸ್ಮಾರಕಕ್ಕೆ ಯಾವುದೇ ಹಾನಿಯಾಗಿಲ್ಲ.
ಗೋಡೆಯನ್ನು ಹಿಂದಿನಂತೆಯೇ ಮರುನಿರ್ಮಿಸುವಂತೆ ಪ್ರಸ್ತಾವ ಕಳಿಸಲಾಗುತ್ತದೆ.
ಕರಾವಳಿ ಕರ್ನಾಟಕ ವರದಿ
ವಿಜಯನಗರ: ಹೊಸಪೇಟೆಯ ಐತಿಹಾಸಿಕ ಹಂಪಿ ಕಮಲ ಮಹಲ್ ಸ್ಮಾರಕದ ಸುತ್ತಲಿನ ಕೋಟೆಯ ಗೋಡೆಯ ಒಂದು ಭಾಗ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಸ್ಮಾರಕಕ್ಕೆ ಯಾವುದೇ ಹಾನಿಯಾಗಿಲ್ಲ.
ಕಮಲ್ ಮಹಲ್ ಬಳಿ ಶೌಚಾಲಯ ನಿರ್ಮಾಣ ಕೆಲಸ ನಡೆಯುತ್ತಿದ್ದು, ಇದರಿಂದಾದ ಕಂಪನದಿಂದ ಗೋಡೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗೋಡೆ ಕುಸಿದ ಸಂದರ್ಭ ಅಲ್ಲಿ ಯಾರೂ ಇರಲಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವೃತ್ತದ ಡೆಪ್ಯೂಟಿ ಸುಪರಿಟೆಂಡೆಂಟ್ ಪಿ. ಕಾಳಿಮುತ್ತು ಅವರು ತಿಳಿಸಿದ್ದಾರೆ. ಗೋಡೆಯನ್ನು ಹಿಂದಿನಂತೆಯೇ ಮರುನಿರ್ಮಿಸುವಂತೆ ಪ್ರಸ್ತಾವ ಕಳಿಸಿ ಒಪ್ಪಿಗೆ ಪಡೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.