ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ

ಅರ್ಹರು ತಮ್ಮ ಹೆಸರು ನೊಂದಾಯಿಸಿ ಶೀಘ್ರ ಲಸಿಕೆ ಪಡೆಯುವಂತೆ ಮನವಿ.

ನಾವೆಲ್ಲರೂ ಭಾರತ ಮತ್ತು ಕರ್ನಾಟಕವನ್ನು ಕೋವಿಡ್ ಮುಕ್ತವಾಗಿಸಲು ಕೈಜೋಡಿಸೋಣ ಎಂದಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯನ್ನು ಯಡಿಯೂರಪ್ಪ ಅವರಿಗೆ ಹಾಕಲಾಗಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿ ನೀಡಿರುವ ಸಿಎಂ, ನಾವೆಲ್ಲರೂ ಭಾರತ ಮತ್ತು ಕರ್ನಾಟಕವನ್ನು ಕೋವಿಡ್ ಮುಕ್ತವಾಗಿಸಲು ಕೈಜೋಡಿಸೋಣ ಎಂದಿದ್ದಾರೆ. ಅರ್ಹರು ತಮ್ಮ ಹೆಸರು ನೊಂದಾಯಿಸಿ ಶೀಘ್ರ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.