ಕುಂದಾಪುರ: ಶರೋನ್ ಹೊಟೇಲ್ ಪಾರ್ಕಿಂಗ್ ಸ್ಥಳದಿಂದ ಕೊಲ್ಲೂರು ಯಾತ್ರಿಕರ ಕಾರು ಕಳ್ಳತನ
ಕೊಲ್ಲೂರಿನಿಂದ ಶರೋನ್ ಹೊಟೇಲ್‌ಗೆ ಬಂದು ಕಾರು ಪಾರ್ಕ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು.
ವ್ಯಾಗನ್ ಆರ್. ಕಾರು ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಇಲ್ಲದಿರುವ ಬಗ್ಗೆ ಪೊಲೀಸರಿಗೆ ದೂರು.
ಕರಾವಳಿ ಕರ್ನಾಟಕ ವರದಿ
ಕುಂದಾಪುರ: ನಗರದ ಶೆರೋನ್ ಹೊಟೇಲ್ ಕಾರು ಪಾರ್ಕಿಂಗ್ ಸ್ಥಳದಿಂದ ಕಾರು ಕಳವುಗೈಯಲಾದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಾಂತಾ ನಾಯರ್ ಎಂಬವರು ಕಾರು ಚಾಲಕ ಮಧುಸೂದನ್ ಎಂಬವರೊಂದಿಗೆ ಕೊಲ್ಲೂರಿನಿಂದ ಶರೋನ್ ಹೊಟೇಲ್‌ಗೆ ಬಂದು ಕಾರು ಪಾರ್ಕ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ವ್ಯಾಗನ್ ಆರ್. ಕಾರು ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಇಲ್ಲದಿರುವ ಬಗ್ಗೆ ಕಾರು ಚಾಲಕ ನೀಡಿದ ಮಾಹಿತಿಯಂತೆ ಪೊಲೀಸರಿಗೆ ದೂರು ನೀಡಿದ್ದಾರೆ.