‘ನೋವು ರಹಿತ’: ಕೋವಿಡ್ ಲಸಿಕೆ ಪಡೆದ ಉದ್ಯಮಿ ರತನ್ ಟಾಟಾ ಬಣ್ಣನೆ
ಕೋವಿಡ್-19 ಲಸಿಕೆಯ ಮೊದಲ ಡೋಸ್ ಇಂದು ಪಡೆದಿದ್ದಾರೆ.
ಪ್ರತಿಯೊಬ್ಬರೂ ಲಸಿಕೆ ಪಡೆದು ಕೋವಿಡ್ ವಿರುದ್ಧ ರಕ್ಷಣೆ ಪಡೆಯುವಂತಾಗಲಿ.
ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಉದ್ಯಮಿ ರತನ್ ಟಾಟಾ ಅವರು ಕೋವಿಡ್-19 ಲಸಿಕೆಯ ಮೊದಲ ಡೋಸ್ ಇಂದು ಪಡೆದಿದ್ದಾರೆ. ನನ್ನ ಮೊದಲ ಡೋಸ್ ಪಡೆದಿದ್ದಕ್ಕಾಗಿ ತುಂಬಾ ಕೃತಜ್ನನಾಗಿದ್ದೇನೆ. ಅದು ತ್ರಾಸದಾಯಕವಾಗಲೀ, ನೋವು ನೀಡುವಂಥದ್ದಾಗಲೀ ಆಗಿರಲಿಲ್ಲ ಎಂದು ತನ್ನ ಅನುಭವ ಬಣ್ಣಿಸಿದ್ದಾರೆ.
ಪ್ರತಿಯೊಬ್ಬರೂ ಲಸಿಕೆ ಪಡೆದು ಕೋವಿಡ್ ವಿರುದ್ಧ ರಕ್ಷಣೆ ಪಡೆಯುವಂತಾಗಲಿ ಎಂದು ಟಾಟಾ ಹಾರೈಸಿದ್ದಾರೆ.