ಕುಂದಾಪುರ: ‘ಅನಂತ ಚೇತನಾ ಟ್ರಸ್ಟ್’ನಿಂದ ಒಂದು ಲಕ್ಷ ರೂ. ವಿದ್ಯಾರ್ಥಿ ವೇತನ
ಕೋಟದ ವಿವೇಕ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸೇರಿದಂತೆ ಪರಿಸರದ ಹಲವು ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು.
ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನ.
ಕರಾವಳಿ ಕರ್ನಾಟಕ ವರದಿ/ಸೀತಾರಾಮ ಮಯ್ಯ
ಕುಂದಾಪುರ: ಸಮೀಪದ ಕೋಟದ ವಿವೇಕ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಂತ ಚೇತನಾ ಟ್ರಸ್ಟ್ (ರಿ.), ಉಡುಪಿ ಇವರು ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ ಪರಿಸರದ ಹಲವು ಶಾಲೆಗಳ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನವನ್ನು ನೀಡಿರುತ್ತಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಹಾಗು ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಶ ಸೀತಾರಾಮ ಮಧ್ಯಸ್ಥ, ವಿವೇಕ ವಿದ್ಯಾಸಂಸ್ಥೆಯ ಹೈಸ್ಕೂಲ್ ವಿಭಾಗಗಳ ಮುಖ್ಯಸ್ಥರುಗಳಾದ ಶ್ರೀಪತಿ ಹೇರ್ಳೆ, ವೆಂಕಟೇಶ ಉಡುಪ ಉಪಸ್ಥಿತರಿದ್ದರು.
ಅನಂತ ಚೇತನಾ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಟ್ರಸ್ಟ್ ಧ್ಯೇಯ ಮತ್ತು ಗುರಿಯನ್ನು ಸಭೆಗೆ ತಿಳಿಸಿದರು. ನೆರೆದಿರುವ ವಿದ್ಯಾರ್ಥಿಗಳಿಗೆ ನೀತಿ ಭೋದನೆಯನ್ನು ಮಾಡಿದರು.
ಟ್ರಸ್ಟ್ ನಿರ್ದೇಶಕಿಯಾಗಿರುವ, ಪ್ರಸ್ತುತ ಮಣಿಪಾಲ ಯುನಿವರ್ಸಿಟಿಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಜ್ಞಾನ ವಿಭಾಗದ ನಿರ್ದೇಶಕಿಯಾಗಿರುವ ಗೀತಾ ಮಯ್ಯ ಅವರು ಕಾರ್ಯಕ್ರಮವನ್ನು ನಿರ್ವಹಿಸಿದ್ದರು.
ಕೋಟ ಪಂಚಾಯತ್ನ ಪೂರ್ಣಿಮಾ ಅಧಿಕಾರಿಯವರು ಧನ್ಯವಾದ ಸಮರ್ಪಣೆಗೈದರು.