ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ದೂರು ದಾಖಲಿಸಿದ ಮಹಿಳಾ ಆಯೋಗ

ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದೆ.

ಯಾವ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಯುವತಿ ಧೈರ್ಯದಿಂದ ಸವಾಲು ಎದುರಿಸಬೇಕು.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿಯವರದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿ ವಿಡೀಯೋ ಪ್ರತಿಕ್ರಿಯೆ ಬಿಡುಗಡೆ ಮಾಡಿದ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದೆ.

ಯುವತಿ ಆತಂಕಿತರಾಗಿರುವುದು ಅವರ ಹೇಳಿಕೆಯಿಂದ ಸ್ಪಷ್ಟಗೊಂಡಿದೆ. ಸಂತ್ರಸ್ತೆಗೆ ರಕ್ಷಣೆ ಒದಗಿಸುವುದು ಸರಕಾರದ ಜವಾಬ್ದಾರಿ. ಯುವತಿಗೆ ರಕ್ಷಣೆ ಒದಗಿಸುವಂತೆ ಕೋರಲಾಗುತ್ತದೆ. ಗೃಹ ಸಚಿವರು ಮತ್ತು ಪೊಲೀಸ್ ಕಮಿಷನರ್ ಅವರಿಗೆ ಆಯೋಗದಿಂದ ಪತ್ರ ಬರೆಯಲಾಗುವುದೆಂದು ಆಯೋಗದ ಅಧ್ಯಕ್ಷರಾದ ಪ್ರಮೀಳಾ ನಾಯ್ದು ಹೇಳಿದ್ದಾರೆ.

ಯಾವ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಲ್ಲ. ಯುವತಿ ಧೈರ್ಯದಿಂದ ಸವಾಲು ಎದುರಿಸಬೇಕು ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಿಂದ ನನ್ನ ಮಾನಹಾನಿಯಾಗಿದ್ದು, ಹಲವು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಾಗಿ ಸಂತ್ರಸ್ತೆ ವಿಡೀಯೋದಲ್ಲಿ ಹೇಳಿಕೊಂಡಿದ್ದು, ಕುಟುಂಬದ ರಕ್ಷಣೆಗೆ ಮನವಿ ಮಾಡಿದ್ದರು.

Get real time updates directly on you device, subscribe now.