ಮೂಡುಬಿದಿರೆ: ಒಂದೇ ಮನೆಯ ಐವರು ನಾಪತ್ತೆ

ಜಯರಾಜ್ ಶೇಖರ್ ಎಂಬವರ ಪತ್ನಿ ಜ್ಯೋತಿಮಣಿ ಮಕ್ಕಳ ಜೊತೆ ನಾಪತ್ತೆ.

ಮೂಡುಬಿದಿರೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಮೂಡುಬಿದಿರೆ: ತಾಲೂಕಿನ ಕಾರಿಂಜೆಯ ಸುವರ್ಣನಗರದಲ್ಲಿ ಮನೆಯೊಂದರ ಐವರು ಸದಸ್ಯರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಜ್ಯೋತಿ ಮಣಿ(36), ದೆಬೋರ(11), ಜುಡಾ ಇಮ್ಯಾನುವೆಲ್(10), ಎಪ್ಸಿಬಾ(8) ಮತ್ತು ಮನೋರಂಜಿತಂ(56) ಎಂಬವರು ನಾಪತ್ತೆಯಾಗಿದ್ದಾರೆ.

ಜಯರಾಜ್ ಶೇಖರ್ ಎಂಬವರ ಪತ್ನಿ ಜ್ಯೋತಿಮಣಿ ಮಕ್ಕಳು ಮತ್ತು ಅತ್ತೆ ಜೊತೆ ನಾಪತ್ತೆಯಾಗಿದ್ದು, ಕಪಾಟಿನಲ್ಲಿದ್ದ ಚಿನ್ನಾಭರಣ ಮತ್ತು 1.40ಲಕ್ಷ ರೂ. ನಗದು ಕೊಂಡುಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆಯ ಮೊದಲು ಮಹಿಳೆ ತನ್ನ ಪತಿಯ ಗಮನಕ್ಕೆ ತಾರದೇ ತನ್ನ ಚಿನ್ನಾಭರಣಗಳನ್ನು ಫೈನಾನ್ಸ್‌ನಲ್ಲಿ ಅಡವಿಟ್ಟು ಅದರಿಂದ ದೊರೆತ 1.80ಲಕ್ಷ ರೂ.ಯನ್ನು ಪರಿಚಿತರಿಗೆ ನೀಡಿದ್ದರು ಎನ್ನಲಾಗಿದೆ. ಅಡಮಾನ ಇರಿಸಿದ ಆಭರಣಗಳನ್ನು ಬಿಡಿಸಿ ತರುವಂತೆ ಪತಿ ಸೂಚಿಸಿದ ಬೆನ್ನಲ್ಲೇ ಮನೆ ತೊರೆದಿದ್ದಾರೆ. ಮಹಿಳೆ ತವರು ಮನೆಗೂ ಹೋಗಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮೂಡುಬಿದಿರೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.