ಕೋಟ ವಿವೇಕ ಕಾಲೇಜಿನಲ್ಲಿ ‘ಅರ್ಥಶಾಸ್ತ್ರ – ಪುನಶ್ಚೇತನ ಕಾರ್ಯಾಗಾರ’
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡ ವಹಿಸಿದ್ದರು.
ಮಾಧವ ಭಟ್, ಅಧ್ಯಕ್ಷರು, ಪ್ರಾಂಶುಪಾಲರ ಸಂಘ, ಉಡುಪಿ ಜಿಲ್ಲೆ ಇವರು ಉಪಸ್ಥಿತರಿದ್ದರು.
ಕರಾವಳಿ ಕರ್ನಾಟಕ ವರದಿ/ಸೀತಾರಾಮ ಮಯ್ಯ
ಕೋಟ : ಈ ವರ್ಷ ಪಿ.ಯು.ಸಿ. ವಿದ್ಯಾರ್ಥಿಗಳ ಕಡಿತಗೊಂಡಿರುವ ಪಠ್ಯಗಳ ಬಗ್ಗೆ ಮತ್ತು ಪ್ರಶ್ನೆ ಪತ್ರಿಕೆ ಸಿದ್ಧತೆ, ಉತ್ತಮ ಫಲಿತಾಂಶ ತರುವ ಬಗ್ಗೆ ಅರ್ಥಶಾಸ್ತ್ರ ವಿಭಾಗದಲ್ಲಿ ಒಂದು ದಿನದ ಪುನಶ್ಚೇತನ ಕಾರ್ಯಗಾರವು, ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ಅರ್ಥಶಾಸ್ತ್ರ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ವೇದಿಕೆ, ಉಡುಪಿ ಹಾಗು ವಿವೇಕ ಪದವಿಪೂರ್ವ ಕಾಲೇಜು ಕೋಟ ಇವರ ಸಹಭಾಗಿತ್ವದಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡ ವಹಿಸಿದ್ದರು. ಕಾರ್ಯಗಾರದ ಉದ್ಘಾಟನೆಯನ್ನು ಭಗವಂತ ಕಟ್ಟಿಮನಿ, ಉಪನಿರ್ದೇಶಕರು, ಪ.ಪೂ.ಶಿಕ್ಷಣ ಇಲಾಖೆ, ಉಡುಪಿ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಎಂ. ರಾಮದೇವ ಐತಾಳ, ಜೊತೆ ಕಾರ್ಯದರ್ಶಿ, ಕೋಟ ವಿದ್ಯಾಸಂಘ (ರಿ.), ಕೋಟ ಇವರು ಭಾಗವಹಿಸಿ ಶುಭ ಹಾರೈಸಿದರು.
ಮಾಧವ ಭಟ್, ಅಧ್ಯಕ್ಷರು, ಪ್ರಾಂಶುಪಾಲರ ಸಂಘ, ಉಡುಪಿ ಜಿಲ್ಲೆ ಇವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ನಾಗರಾಜ ವೈದ್ಯ, ಕೊಟ್ರಸ್ವಾಮಿ, ಸುಜಾತ, ಭಾಸ್ಕರ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಸ್ಕರ ಉಡುಪ, ದಿನಕರ ಶೆಟ್ಟಿ ಹಾಗು ಅರವಿಂದ ಕೆ. ಸಹಕರಿಸಿದ್ದರು.
ಇದೇ ಸಂದರ್ಭದಲ್ಲಿ ಅರ್ಥಶಾಸ್ತ್ರ ವೇದಿಕೆ ವತಿಯಿಂದ ಉಪನಿರ್ದೇಶಕರಾದ ಭಗವಂತ ಕಟ್ಟಿಮನಿ, ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ಮಾಧವ ಭಟ್, ಪ್ರಾಂಶುಪಾಲರಾಗಿ ಭಡ್ತಿ ಹೊಂದಿದ ಗೋಪಾಲ್ ಭಟ್, ಸುಜಾತ ಇವರನ್ನು ಸಂಮ್ಮಾನಿಸಲಾಯಿತು.
2020ನೇ ಸಾಲಿನ ವಾರ್ಷಿಕ ಪರೀಕ್ಷೆಯ ಅರ್ಥಶಾಸ್ತ್ರದಲ್ಲಿ 100ಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಅರ್ಥಶಾಸ್ತ್ರ ಉಪನ್ಯಾಸಕ ಸಂಘದ ಅಧ್ಯಕ್ಷರಾದ ಗೋಪಾಲ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯದರ್ಶಿ ದಿನಕರ ಶೆಟ್ಟಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷರಾದ ಗಣೇಶ ಕುಮಾರ್ ಶೆಟ್ಟಿ ವಂದಿಸಿದರು.ಉಪನ್ಯಾಸಕ ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.