ಕಂಬಳಕ್ಕೆ 1ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಿದ ಸರಕಾರ

ಶಾಸಕ ಸುನಿಲ್ ಕುಮಾರ್ ಕಂಬಳಕ್ಕೆ ಸರಕಾರದಿಂದ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು.

ಕಂಬಳವನ್ನು ಜಿಲ್ಲಾಧಿಕಾರಿ ಆಯ್ಕೆ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ಕರಾವಳಿ ಕರ್ನಾಟಕ ಭಾಗದ ಜನಪ್ರಿಯ ಜಾನಪದ ಕ್ರೀಡೆ ಕಂಬಳವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1ಕೋಟಿ ರೂ. ಸಹಾಯಧನ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕರಾವಳಿಯ ಕಂಬಳಕ್ಕೆ ತಲಾ 5ಲಕ್ಷದಂತೆ ಅನುದಾನ ನೀಡುವ ಸಂಬಂಧ ಪ್ರವಾಸೋದ್ಯಮ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆರ್. ರಾಜಶೇಖರ್ ಅವರು ಇಂದು ಆದೇಶ ಹೊರಡಿಸಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರು ಮಿಯಾರು ಕಂಬಳಕ್ಕೆ ಬಂದ ಸಂದರ್ಭ ಶಾಸಕ ಸುನಿಲ್ ಕುಮಾರ್ ಅವರು ಕಂಬಳಕ್ಕೆ ಸರಕಾರದಿಂದ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಕಂಬಳಕ್ಕೆ ತಲಾ 5ಲಕ್ಷ, ಉಡುಪಿ ಜಿಲ್ಲೆಯ ಹತ್ತು ಕಂಬಳಕ್ಕೆ ತಲಾ 5ಲಕ್ಷ ಅನುದಾನ ಸಿಗಲಿದೆ.

ಸಂಘಟನೆ ಅಥವಾ ತಂಡದಿಂದ ಕಂಬಳವನ್ನು ಆಯೋಜಿಸಬೇಕು, ಜಿಲ್ಲಾಧಿಕಾರಿ ಕಂಬಳವನ್ನು ಆಯ್ಕೆ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Get real time updates directly on you device, subscribe now.