ಬೆಳ್ತಂಗಡಿ: ಯುವತಿಗೆ ಚೂರಿ ಇರಿದ ಆರೋಪಿ ಸೆರೆ

ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ
ಬೆಳ್ತಂಗಡಿ: ಯುವತಿಗೆ ಚೂರಿ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೂಂಜಾಲಕಟ್ಟೆಯ ಶಮೀರ್ ಎಂಬಾತನನ್ನು ಬಂಧಿಸಲಾಗಿದೆ.

ಲಾಯಿಲ ಗ್ರಾಮದ ಪುತ್ರಬೈಲು ಗುರಿಂಗಾನ ಎಂಬಲ್ಲಿ ಆರೋಪಿ ಯುವತಿಗೆ ಚೂರಿ ಇರಿದಿದ್ದ. ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ವಿಚಾರವೊಂದಕ್ಕೆ ಸಂಬಂಧಿಸಿ ಯುವತಿಗೆ ಆರೋಪಿ ಚೂರಿ ಇರಿದಿದ್ದು, ಯುವತಿಯ ಕೈಗಳು ಮತ್ತು ಕುತ್ತಿಗೆಗೆ ಗಾಯವಾಗಿದೆ.

 

Get real time updates directly on you device, subscribe now.