ರಾಜ್ಯದಲ್ಲಿ ಲಾಕ್‌ಡೌನ್ ಪ್ರಶ್ನೆ ಇಲ್ಲ; ತಪ್ಪು ಮಾಹಿತಿ ನೀಡಕೂಡದು: ಸಿಎಂ ಯಡಿಯೂರಪ್ಪ ವಾರ್ನಿಂಗ್

ಸಚಿವ ಸುಧಾಕರ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಸವಕಲ್ಯಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಯಾವುದೇ ಸಮಿತಿ ಲಾಕ್‌ಡೌನ್ ಸಲಹೆಯನ್ನು ಕೊಟ್ಟಿಲ್ಲ. ನಾನು ಕೂಡ ಸಮಿತಿಯಲ್ಲಿ ಇದ್ದೇನೆ. ತಪ್ಪು ಮಾಹಿತಿ ನೀಡಬಾರದು.

ಕರಾವಳಿ ಕರ್ನಾಟಕ ವರದಿ
ಬೀದರ್: ಯಾವುದೇ ಕಾರಣಕ್ಕೂ ಸದ್ಯ ಲಾಕ್‍ಡೌನ್ ಪ್ರಶ್ನೆಯೇ ಇಲ್ಲ. ಯಾವುದೇ ಸಮಿತಿ ಲಾಕ್‌ಡೌನ್ ಸಲಹೆಯನ್ನು ಕೊಟ್ಟಿಲ್ಲ. ನಾನು ಕೂಡ ಸಮಿತಿಯಲ್ಲಿ ಇದ್ದೇನೆ. ತಪ್ಪು ಮಾಹಿತಿ ನೀಡಬಾರದು ಎಂದು ಸಚಿವ ಸುಧಾಕರ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಸವಕಲ್ಯಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಆರೋಗ್ಯ ಸಚಿವ ಸುಧಾಕರ ಅವರು ಲಾಕ್‌ಡೌನ್ ಮಾಡಬೇಕಾಗಬಹುದು ಎಂದು ಆಗಾಗ ಹೇಳುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಹೇಳಿಕೆ ಮಹತ್ವ ಪಡೆದಿದೆ.

ಕನ್ನಡ ಸುದ್ದಿವಾಹಿನಿಗಳಲ್ಲಿ ಲಾಕ್‌ಡೌನ್ ಖಚಿತ ಎಂಬ ಮಾಹಿತಿ ಪ್ರತೀದಿನ ಬಿತ್ತರಿಸಲಾಗುತ್ತಿದ್ದು, ಈಗಾಗಲೇ ತೀವೃ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಜನರ ಆತಂಕಕ್ಕೆ ಕಾರಣವಾಗಿತ್ತು.

 

Get real time updates directly on you device, subscribe now.