ಕೋವಿಡ್ ಭೀತಿ: ಪತ್ರಕರ್ತ ಆತ್ಮಹತ್ಯೆ
ಕೋವಿಡ್ ಸೋಂಕಿನ ಭೀತಿಯಿಂದ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೈದ ಘಟನೆ.
ಪರೀಕ್ಷೆ ಮಾಡಿಸಿಕೊಂಡರೆ ಪಾಸಿಟಿವ್ ವರದಿ ಬಂದರೆ ಮುಂದೆ ಏನು ಮಾಡುವುದು ಎಂದು ಚಿಂತಿತರಾಗಿದ್ದರು.
ಕರಾವಳಿ ಕರ್ನಾಟಕ ವರದಿ
ದಾವಣಗೆರೆ: ಹೊನ್ನಾಳಿ ತಾಲೂಕು ಕುಂದೂರು ಗ್ರಾಮದ ಪತ್ರಕರ್ತರೋರ್ವರು ಕೋವಿಡ್ ಸೋಂಕಿನ ಭೀತಿಯಿಂದ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.
ಪರಮೇಶ್(46) ಅವರು ಆತ್ಮಹತ್ಯೆ ಮಾಡಿಕೊಂಡವರು.
ವಿಜಯ ಕರ್ನಾಟಕದ ಅರೆಕಾಲಿಕ ವರದಿಗಾರರಾಗಿದ್ದ ಪರಮೇಶ್ ಕೆಲ ದಿನಗಳಿಂದ ಜ್ವರ ಪೀಡಿತರಾಗಿದ್ದು, ಕೋವಿಡ್ ಸೋಂಕಿನ ಬಗ್ಗೆ ಭಯಗೊಂಡಿದ್ದರು. ಪರೀಕ್ಷೆ ಮಾಡಿಸಿಕೊಂಡರೆ ಪಾಸಿಟಿವ್ ವರದಿ ಬಂದರೆ ಮುಂದೆ ಏನು ಮಾಡುವುದು ಎಂದು ಚಿಂತಿತರಾಗಿದ್ದರು ಎನ್ನಲಾಗಿದೆ.
ರಾಜ್ಯದಲ್ಲಿ ಬೆಡ್ ಸಿಗದೇ, ಆಕ್ಸಿಜನ್ ಸಿಗದೇ ಜನ ಸಾಯುತ್ತಿದ್ದಾರೆ ಎಂದು ಪರಮೇಶ್ ತೀವೃ ಆತಂಕಿತರಾಗಿದ್ದರು.
ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕುಂದೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.