ಬಹರೈನ್ ನಿಂದ ಮಂಗಳೂರು ತಲುಪಿದ 40 ಮೆಟ್ರಿಕ್ ಟನ್ ಆಮ್ಲಜನಕ

ಕೋವಿಡ್ ಸಂಕಷ್ಟದಲ್ಲಿ ನಲುಗಿರುವ ಭಾರತಕ್ಕೆ ಬಹರೈನ್ ನೆರವಿನ ಹಸ್ತ.

ಮನಾಮದಿಂದ ಎರಡು ಕ್ರಯೋಜನಿಕ್ ಐಸೋ ಕಂಟೈನರ್‌ಗಳಲ್ಲಿ ನೌಕಾಸೇನೆಯ ಹಡಗು ಐಎನ್‌ಎಸ್ ತಲ್ವಾರ್ ಮಂಗಳೂರು ಬಂದರಿಗೆ ಆಮ್ಲಜನಕ ತಂದಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೋವಿಡ್ ಸಂಕಷ್ಟದಲ್ಲಿ ನಲುಗಿರುವ ಭಾರತಕ್ಕೆ ಬಹರೈನ್ ನೆರವಿನ ಹಸ್ತ ಚಾಚಿದ್ದು, ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಕೊಡುಗೆಯಾಗಿ ನೀಡಿದ 40 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ನವ ಮಂಗಳೂರು ಬಂದರಿಗೆ ಮಧ್ಯಾಹ್ನ ತಲುಪಿದೆ.

ಮನಾಮದಿಂದ ಎರಡು ಕ್ರಯೋಜನಿಕ್ ಐಸೋ ಕಂಟೈನರ್‌ಗಳಲ್ಲಿ ನೌಕಾಸೇನೆಯ ಹಡಗು ಐಎನ್‌ಎಸ್ ತಲ್ವಾರ್ ಮಂಗಳೂರು ಬಂದರಿಗೆ ಆಮ್ಲಜನಕ ತಂದಿದೆ.

ಈ ಆಮ್ಲಜನಕವನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ಕೇಂದ್ರ ಸರಕಾರ ಎನ್‌ಎಂಪಿಟಿಗೆ ಸೂಚಿಸಿದೆ.

Get real time updates directly on you device, subscribe now.