ಚಾಮರಾಜನಗರ ಘಟನೆ: ಸಚಿವ ಸುಧಾಕರ್ ರಾಜೀನಾಮೆಗೆ ರೇಣುಕಾಚಾರ್ಯ ಆಗ್ರಹ
ಮೋಜಿಗಾಗಿ ಕೆಲ ಸಚಿವರು ಸಚಿವ ಸ್ಥಾನ ಪಡೆದಿದ್ದಾರೆ. ಅಂಥವರು ಸಚಿವ ಸಂಪುಟದಲ್ಲಿರಲು ಯೋಗ್ಯರಲ್ಲ.
ಯಾವ ಪುರುಷಾರ್ಥಕ್ಕೆ ನಿಮಗೆ ಎರಡು ಖಾತೆ ಬೇಕು ಮಿಸ್ಟರ್ ಸುಧಾಕರ್?
ಕರಾವಳಿ ಕರ್ನಾಟಕ ವರದಿ
ಹೊನ್ನಾಳಿ: ಚಾಮರಾಜನಗರ ಜಿಲ್ಲೆಯಲ್ಲಿ 24 ರೋಗಿಗಳು ಮೃತಪಟ್ಟ ಘಟನೆಗೆ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಅವರ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವ ಪ್ರಯತ್ನ ಮಾಡದೇ ಸುಧಾಕರ್ ಏನು ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ಪುರುಷಾರ್ಥಕ್ಕೆ ನಿಮಗೆ ಎರಡು ಖಾತೆ ಬೇಕು ಮಿಸ್ಟರ್ ಸುಧಾಕರ್? ಒಂದು ಖಾತೆಯನ್ನೇ ಸರಿಯಾಗಿ ನಿಭಾಯಿಸಲಾಗದವರು ಎರಡು ಖಾತೆ ಹೇಗೆ ನಿಭಾಯಿಸುತ್ತೀರಿ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಮೋಜಿಗಾಗಿ ಕೆಲ ಸಚಿವರು ಸಚಿವ ಸ್ಥಾನ ಪಡೆದಿದ್ದಾರೆ. ಅಂಥವರು ಸಚಿವ ಸಂಪುಟದಲ್ಲಿರಲು ಯೋಗ್ಯರಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.