ಯಡಮೊಗೆ: ಕೊಲೆಗೆ ಬಿಜೆಪಿಯೇ ಹೊಣೆ, ಶಾಸಕರ ರಾಜೀನಾಮೆಗೆ ಗೋಪಾಲ ಪೂಜಾರಿ ಆಗ್ರಹ

ಪಂಚಾಯತ್ ಅಧ್ಯಕ್ಷರೇ ಕೊಲೆ ಮಾಡಿರುವುದು ಅಕ್ಷಮ್ಯ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದ್ದಾರೆ.

ಪಂಚಾಯತ್ ಅಧ್ಯಕ್ಷ, ಬಿಜೆಪಿ ಕಾರ್ಯಕರ್ತರ ತಂಡದಿಂದ ಈ ಹತ್ಯೆಯಾಗಿದೆ. ಬಿಜೆಪಿ ಕಾರ್ಯಕರ್ತರು ಟಾಸ್ಕ್ ಫೋರ್ಸ್ ಹೆಸರಲ್ಲಿ ದೊಣ್ಣೆ ಹಿಡಿದು ದೌರ್ಜನ್ಯ ನಡೆಸುವಂಥ ಅಧಿಕಾರ ಕೊಟ್ಟಿದ್ದು ಯಾರು?

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಯಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣದಲ್ಲಿ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಸೇರಿದಂತೆ ಹಲವು ಪ್ರಭಾವಿ ಮುಖಂಡರಿದ್ದು, ಪಂಚಾಯತ್ ಅಧ್ಯಕ್ಷರೇ ಕೊಲೆ ಮಾಡಿರುವುದು ಅಕ್ಷಮ್ಯ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದ್ದಾರೆ.

ಕೊಲೆಯಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಬೇಕು. ಶಾಸಕರು ಕೂಡ ಇಂಥ ಕೃತ್ಯಗಳಿಗೆ ಕುಮ್ಮಕ್ಕು ಕೊಡುತ್ತಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಗೋಪಾಲ ಪೂಜಾರಿ ಆಗ್ರಹಿಸಿದ್ದಾರೆ.

ಉದಯ ಗಾಣಿಗ ಕೊಲೆ ಬಿಜೆಪಿಗರ ಪೂರ್ವನಿಯೋಜಿತ ಕೃತ್ಯ

ಉದಯ್ ಗಾಣಿಗ ಹತ್ಯೆ ಸಾಕಷ್ಟು ದಿನಗಳಿಂದ ನಡೆದ ಸಂಚು ಆಗಿದೆ. ಕೊಳವೆ ಬಾವಿ ಪ್ರಕರಣಕ್ಕೆ ಸಂಬಂಧಿಸಿ ಪಂಚಾಯತ್ ಅಧ್ಯಕ್ಷರು ಸಂಚು ನಡೆಸಿದ್ದಾರೆ. ಬೆಳಿಗ್ಗೆ ಕೃಷಿ ಉಪಕೇಂದ್ರಕ್ಕೆ ಹೋಗಲು ಅನುಮತಿ ಕೇಳಿದರೂ ಸಹ ಹತ್ಯೆ ಮಾಡಿದವರ ದಬ್ಬಾಳಿಕೆಯಿಂದ ಉದಯ್ ಗಾಣಿಗ ಅವರು ವಾಪಾಸ್ ಬಂದಿದ್ದಾರೆ. ಈ ಹತ್ಯೆಗೆ ಅದೂ ಒಂದು ಕಾರಣ ಎಂದು ಕಾಣುತ್ತಿದೆ. ಉದಯ್ ಅವರು ಜಡ್ಕಲ್ ನಲ್ಲಿ ಕೃಷಿ ಉಪಕರಣಗಳ ಒಂದು ಅಂಗಡಿಯಿಂದ ಜೀವನ ನಡೆಸಿಕೊಂಡು ಬಂದವರು. ಉದಯ ಗಾಣಿಗ ಅವರು ಬಚ್ಚು ನಾಯ್ಕ್ ಅವರಿಗೆ ಪೋನ್ ಮಾಡಿ ಅಂಗಡಿಗೆ ಹೋಗುವುದಾಗಿ ಹೇಳಿದ್ದರು.  ಬಚ್ಚು ನಾಯ್ಕ್ ಅವರು ನಾಲ್ಕು ಕಾರು, ಹತ್ತು ಬೈಕುಗಳಲ್ಲಿ ಇದ್ದ ಒಂದು ಕೂಟದ ದುಷ್ಕರ್ಮಿಗಳ ದಾಳಿಯಿಂದ ಉದಯ್ ಗಾಣಿಗ ಅವರು ನರಳಾಡುತ್ತಿದ್ದುದನ್ನು ವಿಡೀಯೋ ಮಾಡಿದಾರೆ. ಸಿದ್ದಾಪುರದಿಂದ 108 ಅಂಬುಲೆನ್ಸ್ ತಲುಪುವ ಚಿಂತಾಜನ ಪರಿಸ್ಥಿತಿಯಲ್ಲಿ ಉದಯ ಗಾಣಿಗ ಅವರು ಅಸುನೀಗಿದ್ದಾರೆ ಎಂದು ಫೂಜಾರಿಯವರು ಘಟನಾವಳಿಗಳ ಚಿತ್ರಣ ನೀಡಿದರು.

ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಜಿಲ್ಲಾಧಿಕಾರಿಯ ಜವಾಬ್ದಾರಿಯನ್ನು ಬಿಜೆಪಿಯವರಿಗೆ ಕೊಟ್ಟಿದ್ದು ಯಾರು?

ಪಂಚಾಯತ್ ಅಧ್ಯಕ್ಷ, ಬಿಜೆಪಿ ಕಾರ್ಯಕರ್ತರ ತಂಡದಿಂದ ಈ ಹತ್ಯೆಯಾಗಿದೆ. ಬಿಜೆಪಿ ಕಾರ್ಯಕರ್ತರು ಟಾಸ್ಕ್ ಫೋರ್ಸ್ ಹೆಸರಲ್ಲಿ ದೊಣ್ಣೆ ಹಿಡಿದು ದೌರ್ಜನ್ಯ ನಡೆಸುವಂಥ ಅಧಿಕಾರವನ್ನು ಅವರಿಗೆ ಕೊಟ್ಟಿದ್ದು ಯಾರು? ಇಂಥ ನೈತಿಕ ಪೊಲೀಸ್ ಗಿರಿಯ ವೀಡಿಯೋಗಳು ವೈರಲ್ ಆಗಿವೆ. ನೈತಿಕ ಪೊಲೀಸ್ ಗಿರಿಯ ಹೆಸರಲ್ಲಿ ಜಿಲ್ಲಾಧಿಕಾರಿಯ ಜವಾಬ್ದಾರಿಯನ್ನು ಬಿಜೆಪಿಯವರಿಗೆ ಕೊಟ್ಟಿದ್ದು ಯಾರು? ಎನ್. ಜಿ.ಒ ಹೆಸರಲ್ಲಿ ಬಿಜೆಪಿ ಮುಖಂಡರು ದೊಣ್ಣೆ ಹಿಡಿದುಕೊಂಡು ದಬ್ಬಾಳಿಕೆ ನಡೆಸುತ್ತಿರುವ ವೀಡಿಯೋಗಳನ್ನು ನಾನು ಕಂಡಿದ್ದೇನೆ. ಈ ಕೊಲೆಗೂ ಭಾರತೀಯ ಜನತಾ ಪಾರ್ಟಿಯೇ ಹೊಣೆ ಎಂದು ಗೋಪಾಲ ಪೂಜಾರಿ ಕೋಪ ವ್ಯಕ್ತಪಡಿಸಿದ್ದಾರೆ.

ಪಂಚಾಯತ್ ಅಧ್ಯಕ್ಷರೇ ಕೊಲೆ ಮಾಡಿರುವುದು ಬಿಜೆಪಿಯ ಸಂಸ್ಕೃತಿ

NGO ಹೆಸರಲ್ಲಿ ಬಿಜೆಪಿ ಕಾರ್ಯಕರ್ತರು ದೊಣ್ಣೆ ಹಿಡಿದು ದಬ್ಬಾಳಿಕೆ ನಡೆಸುತ್ತಿದ್ದಾರೆ. ಅವರು NGO ಗಳಲ್ಲ, ಅವರು ಬಿಜೆಪಿ ಕಾರ್ಯಕರ್ತರು. ಈ ದಬ್ಬಾಳಿಕೆ ನಿಲ್ಲಿಸಿ ಎಂದು ವಿನಯ ಕುಮಾರ ಸೊರಕೆಯವರ ಜೊತೆಗೆ ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದೆ ಎಂದು ಪೂಜಾರಿ ಹೇಳಿದರು.

ಪಂಚಾಯತ್ ಅಧ್ಯಕ್ಷರೇ ಕೊಲೆ ಮಾಡಿರುವುದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್ ಕೆರಾಡಿ, ಶರತ್ ಕುಮಾರ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಇದ್ದರು.

ಕೊಲೆ ಆರೋಪಿ ಪಂಚಾಯತ್ ಅಧ್ಯಕ್ಷ ಯಡಿಯಾಳ ಸೆರೆ

ಬೋರ್ ವೆಲ್ ಪರವಾನಿಗೆ ನೀಡುವ ಸಂಬಂಧ ಉದಯ ಗಾಣಿಗ ಅವರ ಬೈಕಿಗೆ ಕಾರಿನಿಂದ ಢಿಕ್ಕಿ ಹೊಡೆಸಿ ಕೊಲೆಗೈದ ಆರೋಪದಲ್ಲಿ ಯಡಮೊಗೆ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಾಣೇಶ್ ಯಡಿಯಾಳ ಶನಿವಾರ ರಾತ್ರಿ ಹೊಸಬಾಳು ನಿವಾಸಿ, ಸಾಮಾಜಿಕ ಕಾರ್ಯಕರ್ತ ಉದಯ ಗಾಣಿಗ ಅವರೊಂದಿಗೆ ಜಗಳವಾಡಿದ್ದಲ್ಲದೇ ಬೈಕಿಗೆ ಕಾರು ಡಿಕ್ಕಿ ಹೊಡೆಸಿದ್ದು, ಗಂಭೀರ ಗಾಯಗೊಂಡ ಉದಯ ಗಾಣಿಗರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ. ಉದಯ ಗಾಣಿಗ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವಪ್ಪಿದ್ದರು.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಉದಯ ಗಾಣಿಗ(40) ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Get real time updates directly on you device, subscribe now.