ಕುಂದಾಪುರ: ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಕಗ್ಗೊಲೆ
ಕಾಳಾವರದ ನಿವಾಸಿ ಅಜೇಂದ್ರ ಶೆಟ್ಟಿ (33) ಕೊಲೆಯಾದ ವ್ಯಕ್ತಿ.
ಕರಾವಳಿ ಕರ್ನಾಟಕ ವರದಿ
ಕಂದಾಪುರ: ಹಣಕಾಸು ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೋರ್ವರನ್ನು ಶುಕ್ರವಾರ ರಾತ್ರಿ ಕುಂದಾಪುರದ ಕಾಳಾವರ ಗ್ರಮದಲ್ಲಿ ಕತ್ತು ಕತ್ತರಿಸಿ ಕೊಲೆ ಮಾಡಲಾಗಿದೆ.
ಕಾಳಾವರದ ನಿವಾಸಿ ಅಜೇಂದ್ರ ಶೆಟ್ಟಿ (33) ಕೊಲೆಯಾದ ವ್ಯಕ್ತಿ. ಅಜೇಂದ್ರ ಶೆಟ್ಟಿ ಕಾಳಾವರದಲ್ಲಿ ಕಳೆದ ಏಳು ವರ್ಷಗಳಿಂದ ಡ್ರೀಮ್ ಫೈನಾನ್ಸ್ ಎಂಬ ಹೆಸರಿನಲ್ಲಿ ಹಣಕಾಸು ಸಂಸ್ಥೆ ನಡೆಸುತ್ತಿದ್ದರು.
ಅಜೇಂದ್ರ ಶೆಟ್ಟಿ ನಿನ್ನೆ ತಡರಾತ್ರಿಯ ತನಕ ಮನೆಗೆ ಬಂದಿರಲಿಲ್ಲ, ಫೋನ್ ಕರೆಗಳಿಗೂ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಮನೆಯವರು ಅವರನ್ನು ಹುಡುಕಾಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಕೊಲೆಗೈದ ಆರೋಪಿಗಳು ಅಜೇಂದ್ರ ಶೆಟ್ಟಿ ಅವರ ಕಾರನ್ಣೇ ಬಳಸಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು ಕಂಡ್ಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.