ಕುಂದಾಪುರ: ಅಜೇಂದ್ರ ಶೆಟ್ಟಿ ಮರ್ಡರ್. ಕೊಲೆ ಮಾಡಿದನೆ ಪಾರ್ಟ್‌ನರ್?
ಕೊಲೆಯ ವಿರುದ್ಧ ವ್ಯಾಪಕ ಆಕ್ರೋಶ
ಪ್ರಾಥಮಿಕ ತನಿಖೆಯ ಪ್ರಕಾರ ಅಜೇಂದ್ರ ಶೆಟ್ಟಿ ಅವರ ಪಾಲುದಾರ ಅನೂಪ್ ಶೆಟ್ಟಿ ಅಜೇಂದ್ರ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ.
ಕರಾವಳಿ ಕರ್ನಾಟಕ ವರದಿ
ಕುಂದಾಪುರ:ಶುಕ್ರವಾರ ರಾತ್ರಿ ಕೊಲೆಯಾದ ಕಾಳಾವರದ ಡ್ರೀಮ್ ಫೈನಾನ್ಸ್ ಮಾಲಿಕ ಅಜೇಂದ್ರ ಶೆಟ್ಟಿಯನ್ನು ಅವರ ಪಾಲುದಾರನೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಅಜೇಂದ್ರ ಶೆಟ್ಟಿ ಅವರ ಪಾಲುದಾರ ಅನೂಪ್ ಶೆಟ್ಟಿ ಅಜೇಂದ್ರ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ.
2017 ರಿಂದ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ ಮತ್ತು ಅನೂಪ್ ಶೆಟ್ಟಿ ನಡುವೆ ವ್ಯವಹಾರ ಸಂಬಂಧಿ ತಕರಾರುಗಳಿದ್ದು ಅದ್ ಈ ಕೊಲೆಗೆ ಕಾರಣ ಎಂದು ಅಂದಾಜಿಸಲಾಗುತ್ತಿದೆ. ಈ ಅನುಮಾನಗಳಿಗೆ ಪುಷ್ಟಿ ನೀಡುವಂತೆ ಅನೂಪ್ ಶೆಟ್ಟಿ ಅವರ ಬೈಕ್ ಫೈನಾನ್ಸ್ ಸಂಸ್ಥೆಯ ಕಛೇರಿಯ ಹೊರಗೆ ಇದ್ದು ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಅಜೇಂದ್ರ ಶೆಟ್ಟಿ ಅವರ ಕಾರಿನಲ್ಲಿ ಆತ ಉತ್ತರ ಕರ್ನಾಟಕದ ಕಡೆಗೆ ಪರಾರಿಯಾಗಿದ್ದನೆ ಎನ್ನಲಾಗುತ್ತಿದೆ.
ಕೊಲೆಯ ವಿರುದ್ಧ ವ್ಯಾಪಕ ಆಕ್ರೋಶ
ಸ್ನೇಹಮಯಿ ಮತ್ತು ಪರೋಪಕಾರಿ ಸ್ವಭಾವದ ಅಜೇಂದ್ರ ಶೆಟ್ಟಿ ಅವರ ಕೊಲೆಯ ವಿರುದ್ಧ ಅವರ ಪರಿಚಿತರು, ಸ್ನೇಹಿತರು ತೀವ್ರ ಆಕ್ರೋಶ ಮತ್ತು ಆಘಾತ ವ್ಯಕ್ತಪಡಿಸಿದ್ದು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಈ ಕೊಲೆಯ ಸುದ್ದಿಗೆ ಪ್ರತಿಕ್ರಿಯಿಸಿರುವ ಹಲವರು ಕುಂದಾಪುರದಂತಹ ಶಾಂತವಾದ ಊರಿನಲ್ಲಿ ಮುಂಬೈ ಮಾದರಿಯ ಕೊಲೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.