ಬರವಣಿಗೆಯ ಶೈಲಿ ಬದಲಿಸಿಕೊಳ್ಳದಿದ್ದರೆ ಬದುಕು ಕಷ್ಟವಾಗಲಿದೆ: ಪತ್ರಕರ್ತರಿಗೆ ಬಿಜೆಪಿ ಶಾಸಕನ ಬೆದರಿಕೆ

ಜಮ್ಮುವಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್

ಪತ್ರಕರ್ತ ಶುಜಾತ್‌ ಬುಖಾರಿ ಗತಿಯೇ ನಿಮಗೂ ಬರುತ್ತದೆ ಎಂದು ಜಮ್ಮು ಕಾಶ್ಮೀರದ ಬಿಜೆಪಿ ಶಾಸಕ ಚೌಧರಿ ಲಾಲ್‌ ಸಿಂಗ್‌ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ಶ್ರೀನಗರ: ಬದಕುವ ಮತ್ತು ಬರೆಯುವ ನಡುವೆ ಸ್ಪಷ್ಟವಾದ ಗೆರೆ ಎಳೆದುಕೊಳ್ಳಿ. ಬರವಣಿಗೆಯ ಶೈಲಿ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಬದುಕು ಕಷ್ಟವಾಗುತ್ತದೆ. ಪತ್ರಕರ್ತ ಶುಜಾತ್‌ ಬುಖಾರಿ ಗತಿಯೇ ನಿಮಗೂ ಬರುತ್ತದೆ ಎಂದು ಜಮ್ಮು ಕಾಶ್ಮೀರದ ಬಿಜೆಪಿ ಶಾಸಕ ಚೌಧರಿ ಲಾಲ್‌ ಸಿಂಗ್‌ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಕಠುವಾ ಅತ್ಯಾಚಾರ ಪ್ರಕರಣದ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಅವರು ಈ ರೀತಿ ಎಚ್ಚರಿಕೆ ನೀಡಿದ್ದಾರೆ.

ಜಮ್ಮುವಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್ ವರದಿ ಮಾಡುವ ಶೈಲಿಯನ್ನು ಬದಲಿಸಿಕೊಳ್ಳಿ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷದ ಮುಸ್ಲಿಂ ಕುರಿಗಾಹಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.

ಕಠುವಾ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಿಡಿಪಿ–ಬಿಜೆಪಿ ಸರ್ಕಾರದ ಅರಣ್ಯ ಸಚಿವರಾಗಿದ್ದ ಚೌಧರಿ ಲಾಲ್‌ ಸಿಂಗ್‌ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.

ದೇಶ ವಿಭಜನೆಯ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆದ ಮುಸ್ಲಿಮರ ನರಮೇಧ ಮರುಕಳಿಸುತ್ತದೆ ಎಂದು ಕಾಶ್ಮೀರದ ಗುಜ್ಜರ್ ಸಮುದಾಯಕ್ಕೆ ಸಿಂಗ್‌ ಬೆದರಿಕೆ ಒಡ್ಡಿ, ಸುದ್ದಿಯಾಗಿದ್ದರು.

Get real time updates directly on you device, subscribe now.